ದೆಹಲಿ: ಕೊರೋನಾ ಸೋಂಕು ನಿಯಂತ್ರಣಕ್ಕೆ ನಿಯಮಾವಳಿ ಮೂಲಕ ಅಂಕುಶ ಹಾಕಿರುವ ಕೇಂದ್ರ ಸರ್ಕಾರ ಸೋಂಕು ನಿರೋಧಕ ಲಸಿಕೆ ವಿಚಾರದಲ್ಲೂ ಯಶೋಗಾಥೆ ಬರೆದಿದೆ. ಶುಕ್ರವಾರ ಬರೋಬ್ಬರಿ ‘ಕೋಟಿ’ ಲಸಿಕೆಯ ಸಾಧನೆಗೆ ದೇಶ ಸಾಕ್ಷಿಯಾಯಿತು.
ಲಸಿಕೆ ಸಿಗುತ್ತಿಲ್ಲ, ಲಸಿಕೆ ಅಭಿಯಾನ ಯಶಸ್ವಿಯಾಗುತ್ತಿಲ್ಲ ಎಂಬ ಪ್ರತಿಪಕ್ಷಗಳ ಟೀಕೆ ಒಂದೆಡೆಯಾದರೆ, ಅಧಿಕಾರಿಗಳು ತಮ್ಮದೇ ರೀತಿಯಲ್ಲಿ ಲಸಿಕಾ ಕೈಂಕರ್ಯ ಕೈಗೊಂಡು ಸುಮಾರು ಒಂದು ಕೋಟಿ ಲಸಿಕೆಯನ್ನು ನೀಡುವ ಮೂಲಕ ಜಾಗತಿಕ ಗಮನ ಸೆಳೆದಿದ್ದಾರೆ. ವಿವಿಧ ರಾಜ್ಯಗಳಲ್ಲಿ ಈ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಕೋಟಿ ಸಂಖ್ಯೆಯನ್ನು ಒಂದೇ ದಿನ ಕ್ರಮಿಸಿರುವುದು ವಿಶೇಷ.
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೋಟಿ ದಾಟುವುದು ಒಂದು ಮಹತ್ವದ ಸಾಧನೆಯಾಗಿದೆ ಎಂದು ಅಭಿಯಾನದಲ್ಲಿ ಹಿಂದಿನ ಶ್ರಮವನ್ನು ಅಭಿನಂಧಿಸಿದ್ದಾರೆ. ಲಸಿಕೆ ಹಾಕಿಸಿಕೊಂಡವರಿಗೆ ಮತ್ತು ಲಸಿಕೆ ಹಾಕುವಲ್ಲಿ ಯಶಸ್ವಿಯಾದವರಿಗೆ ಅಭಿನಂದನೆಗಳನ್ನು ಅವರು ಸಲ್ಲಿಸಿದ್ದಾರೆ.
Record vaccination numbers today!
Crossing 1 crore is a momentous feat. Kudos to those getting vaccinated and those making the vaccination drive a success.
— Narendra Modi (@narendramodi) August 27, 2021
‘ಕೋಟಿ’ ಕಪಾಳಮೋಕ್ಷ: ಸಿ.ಟಿ.ರವಿ
ಈ ಅಭಿಯಾನದ ಯಶೋಗಾಥೆಯು ಕಾಂಗ್ರೆಸ್‌ಗೆ ಕಪಾಲಮೋಕ್ಷ ಎಂದು ಬಿಜೆಪಿ ಹೇಳಿದೆ. ಮೋದಿ ಸಾಧನೆಯ ಬಗ್ಗೆ ಟೀಕೆಗಳನ್ನು ಮಾಡುತ್ತಿರುವ ಕಾಂಗ್ರೆಸ್‌ನವರಿಗೆ ಮೋದಿಯವರು ಮೌನದಿಂದಲೇ ಮಾಡಿರುವ ಕೆಲಸವೇ ಉತತರವಾಗಿದೆ ಎಂದವರು ಹೇಳಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ಮುಖವಾಣಿಯಲ್ಲಿ ಪ್ರಕಟವಾಗುತ್ತಿರುವ ಟೀಕೆಗಳತ್ತ ಬೊಟ್ಟು ಮಾಡಿರುವ ಸಿ.ಟಿ.ರವಿ, ಈ ‘ಕೋಟಿ’ ಉತ್ತರದ ಮೂಲಕ ಕಾಂಗ್ರೆಸ್‌ಗೆ ಕಪಾಳ ಮೋಕ್ಚವಾಗಿದೆ ಎಂದು ಎಂದು ಎದಿರೇಟು ನೀಡಿದ್ದಾರೆ. ಈ ಕುರಿತಂತೆ ಅವರು ಮಾಡಿರುವ ಟ್ವೀಟ್ ಕೂಡಾ ಗಮನಸೆಳೆದಿದೆ.
ONE CRORE Indians were vaccinated today.
This is a slap on the face of the National Herald Scamster who declared that India is not vaccinating enough people.
Jai Hind 🇮🇳
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) August 27, 2021