ಬೆಂಗಳೂರು: ಕೋವಿಡ್-19 ಸೋಂಕಿಗೊಳಗಾಗಿ ಮೃತಪಟ್ಟವರ ಶವಗಳನ್ನು ಅವರ ಅಥವಾ ಸಂಬಂಧಿಕರ ಖಾಸಗಿ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ಸರ್ಕಾರ ಅನುಮತಿ ನೀಡಿದೆ. ಸೋಂಕಿಗೊಳಗಾಗಿ ಮೃತಪಟ್ಟವರನ್ನು ಖಾಸಗಿ ಜಮೀನಿನಲ್ಲಿ ಹೂಳಲು ಅಥವಾ ಸುಡಲು ಅವಕಾಶ ಇದೆ ಎಂದು ಸರ್ಕಾರ ಹೇಳಿದೆ.
ಈ ಸಂಬಂಧ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಆದರೆ ಶವ ಸಂಸ್ಕಾರ ಸಂದರ್ಭದಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವವರು ಮಾಸ್ಕ್ ಗಳನ್ನು ಧರಿಸಬೇಕು. ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಮೃತದೇಹವನ್ನು ಸ್ಪರ್ಶಿಸುವವರು ಪೂರ್ಣ ಪಿಪಿಇ ಕಿಟ್ ಮತ್ತು ಕೈಗವಸುಗಳನ್ನು ಧರಿಸುವುದು ಕಡ್ಡಾಯವಾಗಿದೆ ಎಂದು ಹೇಳಲಾಗಿದೆ.