ನಾಡನ್ನು ಕಾಯಬೇಕಾದ ಪೊಲೀಸರೇ ಅಕ್ರಮಕ್ಕಿಳಿದರೇ? ಇಂಥದ್ದೊಂದು ಬೆಳವಣಿಗೆಯು ‘ಪೊಲೀಸ್ ಇಲಾಖೆ ಮೇಲಿನ ಜನರ ನಂಬಿಕೆ’ಗೆ ಕೊಡಲಿ ಏಟು ಕೊಟ್ಟಂತಿದೆ..
ಬೆಂಗಳೂರು: ರಾಜಕಾರಣಿಗಳಿಗೂ ರೌಡಿಗಳಗೂ ಸಂಬಂಧ ಇರುವುದು ಸಹಜ. ಆದರೆ ಇತ್ತೀಚಿನ ದಿನಗಳ ಬೆಳವಣಿಗೆ ಮಾತ್ರ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿನ ರೌಡಿ ಶೀಟರ್ ಸೈಲೆಂಟ್ ಸುನಿಲ್ ಬಿಜೆಪಿ ಸಂಸದರೊ಼ಂದಿಗೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡ ಬೆಳವಣಿಗೆ ನಂತರ ಕಾಂಗ್ರೆಸ್-ಬಿಜೆಪಿ ನಡುವೆ ಭಾರೀ ವಗ್ವಾದ ನಡೆದಿದೆ.
ಇದೇ ಸಂದರ್ಭದಲ್ಲಿ ರೌಡಿ ಶೀಟರ್‌ಗಳನ್ನು ಹಾಗೂ ಪೊಲೀಸರನ್ನು ಆಡಳಿತಾರೂಢ ಬಿಜೆಪಿಯು ಹಫ್ತಾ ವಸೂಲಿಗೆ ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ರಾಜ್ಯದಲ್ಲಿ ಹರಿದಾಡುತ್ತಿದೆ. ಈ ಕುರಿತಂತೆ ಪ್ರತಿಪಕ್ಷ ಕಾಂಗ್ರೆಸ್ ಕೂಡಾ ಗಂಭೀರ ಆರೋಪ ಮಾಡಿದೆ. ಕಲಬುರಗಿಯಲ್ಲಿ ಕಮೀಷನರ್ ಪತ್ನಿ ರೌಡಿ ಶೀಟರ್ ಬಳಿ ಹಣ ವಸೂಲಿ ಮಾಡಿದ್ದಾರೆಂಬ ಆರೋಪ ಕೇಳಿಬಂದಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್ ಈ ಆರೋಪ ಮಾಡಿದೆ.
ಸಿಎಂ, ಗೃಹ ಮಂತ್ರಿ, ಡಿಜಿಪಿಗೆ ತರಾಟೆ
‘ಬಿಜೆಪಿಗೂ ರೌಡಿಗಳಿಗೂ ಹಳೆಯ ಸಂಬಂಧವಿದೆ. ಕಲ್ಬುರ್ಗಿಯಲ್ಲಿ ಬಿಜೆಪಿ ಸೇರಿದ್ದ ಮತ್ತೊಬ್ಬ ರೌಡಿ ಶೀಟರ್‌ಗೆ ಪೊಲೀಸರೊಂದಿಗೆ ಇರುವ ಹಣಕಾಸಿನ ವ್ಯವಹರವೇನು? ರೌಡಿ ಶೀಟರ್‌ಗಳನ್ನು ಹಾಗೂ ಪೊಲೀಸರನ್ನು ಹಫ್ತಾ ವಸೂಲಿಗೆ ಬಳಸಿ ಕೊಳ್ಳುತ್ತಿದೆಯೇ ಬಿಜೆಪಿ? ಎಂಬ ಪ್ರಶ್ನೆಗಳೊಂದಿಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ರೌಡಿಗಳನ್ನು ಪ್ರೋತ್ಸಾಹಿಸುತ್ತಿರುವ ತಮ್ಮದು ಯಾವ ಸೀಮೆಯ ನೈತಿಕತೆ?’ ಎಂದು ಕೇಳಿದೆ.
ಬಿಜೆಪಿಗೂ ರೌಡಿಗಳಿಗೂ ಹಳೆಯ ಸಂಬಂಧವಿದೆ.
ಕಲ್ಬುರ್ಗಿಯಲ್ಲಿ ಬಿಜೆಪಿ ಸೇರಿದ್ದ ಮತ್ತೊಬ್ಬ ರೌಡಿ ಶೀಟರ್‌ಗೆ ಪೊಲೀಸರೊಂದಿಗೆ ಇರುವ ಹಣಕಾಸಿನ ವ್ಯವಹರವೇನು?
ರೌಡಿ ಶೀಟರ್‌ಗಳನ್ನು ಹಾಗೂ ಪೊಲೀಸರನ್ನು ಹಫ್ತಾ ವಸೂಲಿಗೆ ಬಳಸಿ ಕೊಳ್ಳುತ್ತಿದೆಯೇ ಬಿಜೆಪಿ?@BSBommai ಅವರೇ, ರೌಡಿಗಳನ್ನು ಪ್ರೋತ್ಸಾಹಿಸುತ್ತಿರುವ ತಮ್ಮದು ಯಾವ ಸೀಮೆಯ ನೈತಿಕತೆ? pic.twitter.com/3dYUyZbgGK
— Karnataka Congress (@INCKarnataka) December 3, 2022
ಇದೇ ವೇಳೆ, ‘ಕಲ್ಬುರ್ಗಿ ಕಮಿಷನರ್ ತಮ್ಮ ಪತ್ನಿ ರೌಡಿ ಶೀಟರ್ ಬಳಿ ಹಣ ಕೇಳಿದ್ದನ್ನು ತಪ್ಪೇ ಅಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ ಎಂದು ಹೇಳಿರುವ ಕಾಂಗ್ರೆಸ್ ಇದಕ್ಕೆ ಸಾಕ್ಷಿಯಾಗಿ ವೀಡಿಯೋವನ್ನು ಟ್ವೀಟ್ ಮಾಡಿದೆ. ರೌಡಿಗಳ ಬಳಿ ಪೊಲೀಸ್ ಉನ್ನತಾಧಿಕಾರಿಗಳು ಕುಟುಂಬದವರು ಹಣ ಪಡೆಯುವುದು ನಿಮಗೆ ಸಮ್ಮತವೇ? ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಅದನ್ನು ಸಮರ್ಥಿಸುವ ಅಧಿಕಾರಿಯ ನಡೆಯನ್ನು ತಾವೂ ಸಮರ್ಥಿಸುವಿರಾ, ಕ್ರಮ ಕೈಗೊಳ್ಳುವಿರಾ?’ ಎಂದೂ ಕೇಳಿರುವ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.
ಕಲ್ಬುರ್ಗಿ ಕಮಿಷನರ್ ತಮ್ಮ ಪತ್ನಿ ರೌಡಿ ಶೀಟರ್ ಬಳಿ ಹಣ ಕೇಳಿದ್ದನ್ನು ತಪ್ಪೇ ಅಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ@JnanendraAraga, @DgpKarnataka ಅವರೇ, ರೌಡಿಗಳ ಬಳಿ ಪೊಲೀಸ್ ಉನ್ನತಾಧಿಕಾರಿಗಳು ಕುಟುಂಬದವರು ಹಣ ಪಡೆಯುವುದು ನಿಮಗೆ ಸಮ್ಮತವೇ?
ಅದನ್ನು ಸಮರ್ಥಿಸುವ ಅಧಿಕಾರಿಯ ನಡೆಯನ್ನು ತಾವೂ ಸಮರ್ಥಿಸುವಿರಾ, ಕ್ರಮ ಕೈಗೊಳ್ಳುವಿರಾ? pic.twitter.com/8pb5KIyNTl
— Karnataka Congress (@INCKarnataka) December 3, 2022






















































