ಬೆಂಗಳೂರು: ಸಿಎಂ ಸ್ಥಾನ ಸಿಗೊತ್ತೋ ಗೊತ್ತಿಲ್ಲ, ಬಾರೀ ಬಹುಮತದ ಗೆಲುವಿಗಿಂತ ದೊಡ್ಡ ಗಿಫ್ಟ್ ಬೇರೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ನಿರ್ಧಾರವನ್ನು ಹೈಕಮಾಂಡ್ ನಾಯಕರಿಗೆ ಬಿಡುವ ಒಂದು ಸಾಲಿನ ನಿರ್ಣಯಕ್ಕೆ ಎಲ್ಲಾ ಶಾಸಕರು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ. ಕಾಂಗ್ರೆಸ್ ಸಂಪ್ರದಾಯದಂತೆ ಎಲ್ಲಾ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ ಎಂದರು.
ಹುಟ್ಟುಹಬ್ಬದ ದಿನ ಹೈಕಮಾಂಡ್ ನಿಮಗೆ ಉಡುಗೊರೆ ನೀಡುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ‘ಹೈಕಮಾಂಡ್ ಉಡುಗೊರೆ ನೀಡುತ್ತದೆಯೋ ಇಲ್ಲವೋ, ಆದರೆ ರಾಜ್ಯದ ಜನ ನನ್ನ ಮೇಲೆ ವಿಶ್ವಾಸ ಇಟ್ಟು ನನ್ನ ಅಧ್ಯಕ್ಷತೆಯಲ್ಲಿ ಪಕ್ಷವನ್ನು 135 ಸ್ಥಾನಗಳ ಬಹುದೊಡ್ಡ ಬಹುಮತದಿಂದ ಗೆಲ್ಲಿಸಿದ್ದಾರೆ. ಇದಕ್ಕಿಂತ ದೊಡ್ಡ ಉಡುಗೋರೆ ನಿರೀಕ್ಷಿಸಲು ಸಾಧ್ಯವೇ? ಎಂದರು.
ಅಧಿಕಾರ ಇಲ್ಲದಿದ್ದರೂ, ಎಲ್ಲಾ ಕಿರುಕುಳ, ಸವಾಲುಗಳನ್ನು ಎದುರಿಸಿ, ಈ ಡಬಲ್ ಇಂಜಿನ್ ಸರ್ಕಾರಗಳನ್ನು ಎದುರಿಸಿ ಪಕ್ಷವನ್ನು ಸಂಘಟನೆ ಮಾಡಿದ್ದೇನೆ’ ಎಂದು ಡಿಕೆಶಿ ತಿಳಿಸಿದರು.