ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆಯ ನಿರ್ಧಾರದ ಗುಮ್ಮ ಬಿಎಸ್‌ವೈ ಬೆಂಲಿಗರನ್ನು ಕಾಡುತ್ತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ನಾಯಕ ಅರುಣ್ ಸಿಂಗ್ ಬೆಂಗಳೂರು ಭೇಟಿ ನಂತರವಂತೂ ಕದನಕೌತುಕ ಸೃಷ್ಟಿಸಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬೇಕೆಂಬ ಕೂಗು ಪ್ರತಿಧ್ವನಿಸುತ್ತಿದ್ದಂತೆಯೇ ಅರುಣ್ ಸಿಂಗ್ ಅಗಮನವೂ ಸಂಚಲನ ಸೃಷ್ಟಿಸಿದೆ. ಬುಧವಾರ ಸಚಿವರೊಂದಿಗೆ ಸಭೆ ನಡೆಸಿದ ನಂತರ ಇಂದು ಶಾಸಕರ ಮುಖಾಮುಖಿ ಕುತೂಹಲಕಾರಿ ಬೆಳವಣಿಗೆ. ಶುಕ್ರವಾರ ಕೋರ್ ಕಮಿಟಿ ಸಭೆಯೂ ನಡೆಯಲಿದೆ.
ಈ ನಡುವೆ ಎಲ್ಲಾ ಹಂತಗಳಲ್ಲೂ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದ ಈಶ್ವರಪ್ಪ ಅವರು, ಸಿಎಂ ಬದಲಾವಣೆಗಾಗಿ ಬಿಜೆಪಿ ಶಾಸಕರು ದೆಹಲಿಗೆ ತೆರಳಿದ್ದನ್ನು ಹೇಳಿಕೊಂಡಿದ್ದರು. ಆದರೆ ಇಂದು ಅವರು ಗುಪ್ ಚುಪ್.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಬಗೆಗಿನ ಪ್ರಶ್ನೆ ಎದುರಾಯಿತು. ಆದರೆ ಈಶ್ವರಪ್ಪ ಅವದ್ದು ಮೌನವೇ ಉತ್ತರವಾಗಿತ್ತು. ಸಿಎಂ ಬದಲಾವಣೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಸಚಿವ ಕೆ.ಎಸ್. ಈಶ್ವರಪ್ಪ ನಿರಾಕರಿಸಿದರು.
ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರು ಬುಧವಾರ ಎಲ್ಲ ಸಚಿವರ ಸಭೆ ನಡೆಸಿದ್ದಾರೆ. ನಾಳೆ ಪಕ್ಷದ ಕೋರ್ ಕಮಿಟಿ ಸಭೆಯಿದ್ದು ಅದರಲ್ಲಿ ಭಾಗವಹಿಸುವುದಾಗಿ ಹೇಳಿದರು.