ಮಂಗಳೂರು: ಬಂಟ್ವಾಳದ ನಾವೂರಿನ ಮಾತೃಭೂಮಿ ಸೇವಾ ಸಂಘವು ನಾವೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ‘ಚಿಣ್ಣರ ಚಿತ್ತಾರ ಮಕ್ಕಳ ಸಾಂಸ್ಕೃತಿಕ ಸಂಭ್ರಮ’ ಗಮನಸೆಳೆಯಿತು. ಮಕ್ಕಳ ಪ್ರತಿಭೆಗೆ ಹೆತ್ತವರ ಪ್ರೋತ್ಸಾಹ ಅನನ್ಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಪುಟಾಣಿಗಳು ಅದ್ಭುತ ಪ್ರದರ್ಶನ ಮೂಲಕ ನೋಡುಗರನ್ನು ರಂಜಿಸಿದರು. ಸಾಂಸ್ಕತಿಕ ಲೋಕವೇ ಅಲ್ಲಿ ಅನಾವರಣವಾದಂತಿತ್ತು.
ಚಿಣ್ಣರ ಚಿತ್ತಾರ ಮಕ್ಕಳ ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ( ನಿ) ಬಂಟ್ವಾಳ ಇದರ ಅಧ್ಯಕ್ಷರೂ ಆದ ವಕೀಲ ಅರುಣ್ ರೋಷನ್ ಡಿಸೋಜ ಮಾತನಾಡಿ, ಗ್ರಾಮದ ಜನತೆ ಸಮರ್ಪಕವಾಗಿ ಸ್ಪಂದಿಸಿದರೆ ಗ್ರಾಮದಲ್ಲಿರುವ ಶಾಲೆಗಳು ಬೆಳಗಿದಂತೆ ಎಂದು ಎಂದು ಪ್ರತಿಪಾದಿಸಿದರು.
ಉದ್ಘಾಟನೆ ನೆರವೇರಿಸಿದ ಯುವಶಕ್ತಿ ಸೇವಾ ಪಥದ ದಕ್ಷಿಣ ಕನ್ನಡ ಕಾರ್ಯ ವಿಭಾಗದ ಸದಸ್ಯರಾದ ಗಣೇಶ್ ಕುಲಾಲ್ ಕೆದಿಲ ಮಾತನಾಡಿ, ಸಮಾಜದ ಜೊತೆಯಾಗಿ ಸಹಕಾರ ಸ್ವರೂಪವಾದಾಗ ಒಂದು ರೀತಿಯ ನೆಮ್ಮದಿ ಎಂದರು.
ಶ್ರೀ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ವೆಂಕಟದಾಸ್ ಭಟ್ ನಾವೂರು ವಲಯದ ಅಂಗನವಾಡಿ ಮೇಲ್ವಿಚಾರಕರಾದ ಯಶೋಧ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ, ಉಪಾಧ್ಯಕ್ಷ ನಾರಾಯಣ ಕುಲಾಲ್, ಸದಸ್ಯರಾದ ಜನಾರ್ಧನ ಕೊಂಬೆಟ್ಟು ಹಾಗೂ ಗೌರವ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸತೀಶ್ ಪದವು, ಸದಸ್ಯ ಚೆನ್ನಪ್ಪ ಕಳಮೆ, ಮಾತೃಭೂಮಿ ಸಂಘದ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಪ್ರಭಾರ ಮುಖ್ಯೋಪಾಧ್ಯಾಯರಾದ ಸುನಿತಾ ಭಾಯಿ ಮೊದಾಲಾದ ಗಣ್ಯರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.
ಇದೇ ವೇಳೆ, ಯುವ ಶಕ್ತಿ ಸೇವಾ ಪಥ ಸೇವಾ ಸಂಘಟನೆಯು ಶಾಲೆಗೆ ಕೊಡುಗೆಯಾಗಿ ನೀಡಿದ ಶುದ್ದ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರ ಮಾಡಲಾಯಿತು. ಯುವ ಶಕ್ತಿ ಸೇವಾ ಪಥದ ಪರವಾಗಿ ಸುವಿಲ್ ಹಾಗೂ ವಿಟ್ಲ ಸಹಕಾರಿ ಬ್ಯಾಂಕ್ ಪರವಾಗಿ ಸಿಬ್ಬಂದಿ ಶ್ರೀ ನಿಧಿ.ವಿ.ಕುಡ್ವಾ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು.
ಅತಿಥಿ ಶಿಕ್ಷಕಿ ಸಂಘಟನೆಯ ಸದಸ್ಯೆ ಕಾವ್ಯಶ್ರೀ, ಸ್ವಾಗತಿಸಿ, ಕಾರ್ಯದರ್ಶಿ ಲೋಹಿತ್ ಕೆ.ಕಣಪಾದೆ ವಂದಿಸಿದರು. ಸಂಘಟನೆಯ ಸಂಯೋಜಕ ನಿರ್ದೇಶಕ ಸುರೇಶ್ ಎಸ್.ನಾವೂರು ಕಾರ್ಯಕ್ರಮ ನಿರೂಪಿಸಿದರು. ಸಮಾಜ ಸೇವಕರು ಸಂಪತ್ತ್ ಸನಿಲ್ ಅಲ್ಲಿಪಾದೆ ಸಹಕರಿಸಿದರು.































































