ಇದು ಅಮ್ಮನ ವಿರುದ್ದವೇ 3 ವರ್ಷದ ಮಗು ಪೊಲೀಸರಿಗೆ ನೀಡಿದ ದೂರಿನ ಕಥಾನಕ. ಇದು ನಡೆದದ್ದು ಮಧ್ಯಪ್ರದೇಶದ ಭೋಪಾಲ್ ಬಳಿ.
ತನ್ನ ಬಳಿಯಿದ್ದ ಚಾಕಲೆಟ್ ಮತ್ತು ಕ್ಯಾಂಡಿಯನ್ನು ತಾಯಿ ಕಸಿದುಕೊಂಡರೆಂಬುದು ಬಾಲಕನ ಆಕ್ರೋಶ. ಅಮ್ಮನ ಬಗ್ಗೆ ಮುನಿಸಿಕೊಂಡ ಬಾಲಕ ಪೊಲೀಸರೆದುರು ದೂರು ಹೇಳಿಕೊಂಡಿರುವ ವೀಡಿಯೋ ವೈರಲ್ ಆಗಿದೆ.
ಈ ಮಗುವಿನ ಮುಗ್ಧತೆ ಕಂಡು ಪೊಲೀಸರಷ್ಟೇ ಅಲ್ಲ, ಮಧ್ಯಪ್ರದೇಶದ ಗೃಹ ಸಚಿವ ಎನ್. ಮಿಶ್ರಾ ಅವರೂ ಬಾವುಕರಾಗಿದ್ದಾರೆ. ಈ ಪುಟ್ಟ ಪೋರನಿಗೆ ಪೋರನಿಗೆ ಸೈಕಲೊಂದನ್ನು ದೀಪಾವಳಿ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ.
https://twitter.com/iamanjalisingh3/status/1582250855969198080?t=8g1FxXKNAmtS_cbmYQXAIw&s=08
























































