ಅಹಿತಕರ ಘಟನೆಗಳು ಸಂಭವಿಸಿದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸುವುದು ಸಾಮಾನ್ಯ. ಇದೀಗ ಗಣಿ ಸ್ಫೋಟ ಪ್ರಕರಣದಲ್ಲಿ ಖಡಕ್ ಅಧಿಕಾರಿಗಳ ತಲೆದಂಡವಾಗಿರುವುದೂ ಇಲಾಖಾ ಪ್ರಕ್ರಿಯೆ..
ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿಗೆ ಸಮೀಪವೇ ಸಂವಿಸಿದ ಸ್ಫೋಟಕ ದುರಂತ ಪೊಲೀಸ್ ಇಲಾಖೆಯನ್ನೇ ನಡುಗಿಸಿದೆ. ಹಿರೇನಾಗವಲ್ಲಿ ಸ್ಪೋಟ ಘಟನೆ ಖಡಕ್ ಅಧಿಕಾರಿಗಳಿಗೇ ಮುಳುವಾಯಿತು ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿದೆ ಗೃಹ ಇಲಾಖೆಯ ನಡೆ.
ಹಿರೇನಾಗವಲ್ಲಿ ಸ್ಪೋಟ ಘಟನೆಗೆ ಸಂಬಂಧಿಸಿದಂತೆ ತನಿಖೆ ಸಾಗಿರುವಾಗಲೇ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವ ಉನ್ಬತಾಧಿಕಾರಿಗಳ ಕ್ಷಿಪ್ರ ಕ್ರಮ ಪೊಲೀಸ್ ಇಲಾಖೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಗುಡಿಬಂಡೆ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್’ರನ್ನು ಇಲಾಖೆ ಅಮಾನತು ಮಾಡಿದೆ. ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ಸಬ್ ಇನ್ಸ್ಪೆಕ್ಟರ್ ಗೋಪಾಲರೆಡ್ಡಿ ಅಮಾನುಗೊಂಡಿರುವ ಅಧಿಕಾರಿಗಳಾಗಿದ್ದು, ಕರ್ತವ್ಯ ಲೋಪದ ಆರೋಪದಡಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆನ್ನಲಾಗಿದೆ.
ಸೋಮವಾರ ಸಂಭವಿಸಿದ ಸ್ಫೋಟ ಘಟನೆ ಆರು ಮಂದಿಯನ್ನು ಬಲಿತೆಗೆದುಕೊಂಡಿತ್ತು. ಈ ಪ್ರಕರಣಕ್ಕೆ ಪೊಲೀಸರ ನಿರ್ಲಕ್ಷ್ಯ ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಹಾಗಾಗಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ಈ ತಕ್ಷಣದ ಕ್ರಮ ಕೈಗೊಂಡಿದ್ದಾರೆ.
ಯಾವುದೇ ಅಹಿತಕರ ಘಟನೆ ಸಂಭವಿಸಿದರೂ ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡುವುದು ಸಹಜ ಕ್ರಮ ಎಂಬಂತಾಗಿದೆ. ಅಪರಾಧ ನಿಗ್ರಹದಲ್ಲಿ ಸಮರ್ಥ ಕಾರ್ಯನಿರ್ವಹಿಸಿ ಖಡಕ್ ಪೊಲೀಸ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ಅಧಿಕಾರಿಗಳ ಪಾಲಿಗೆ ಇದೀಗ ತಮ್ಮ ಠಾಣಾ ಸರಹದ್ದಿನಲ್ಲಿನ ಘಟನೆಯೊಂದು ಕಳಂಕವಾಗಿ ಪರಿಣಮಿಸಿದೆ. ಅನುವಾರ್ಯ ಎಂಬಂತೆ ಕರ್ತವ್ಯಲೋಪದ ಆರೋಪವನ್ನೂ ಎದುರಿಸುವಂತಾಗಿದೆ ಎಂಬುದು ಈ ಅಧಿಕಾರಿಗಳ ಆಪ್ತ ವಲಯದ ಅಭಿಪ್ರಾಯ.