ಚಾಮರಾಜನಗರ: ಕೋವಿಡ್ ಸಂಕಟ ಕಾಲದಲ್ಲಿ ಎಲ್ಲೆಲ್ಲೂ ಮರಣ ಮೃದಂಗದ ಸದ್ದು ಮಾರ್ಧನಿಸುತ್ತಿದೆ. ಈ ಸಂದರ್ಭದಲ್ಲೇ ಆಮ್ಲಜನಕ ಕೊರತೆ ಹಾಗೂ ವಿವಿಧ ಕಾರಣಗಳಿಂದಾಗಿ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ಕೇವಲ 24 ತಾಸುಗಳಲ್ಲಿ ಸಾವನ್ನಪ್ಪಿದ್ದಾರೆ.
ಮೃತರ ಪೈಕಿ ಒಬ್ಬೊಬ್ಬರದ್ದು ಒಂದೊಂದು ವ್ಯಥೆಯ ಕಥೆ. ಅದರಲ್ಲೂ ನವವಿವಾಹಿತನೊಬ್ಬನ ಕರುಣಾಜನಕ ಕಥೆ ಕೇಳಿದರೆ ಅತೀವ ನೋವಾಗುತ್ತದೆ ಎನ್ನುತ್ತಿದ್ದಾರೆ ಆತನ ಜೊತೆಗಾರರು.
ಚಾಮರಾಜನಗರ ರಾತ್ರಿ ವಿಡಿಯೋ ಕಾಲ್ ಮೂಲಕ ಆಮ್ಲಜನಕ ಕೊರತೆ ಬಗ್ಗೆ ಅಳಲು ತೋಡಿಕೊಂಡಿದ್ದ ನವವಿವಾಹಿತ ಬೆಳಾಗಾಗುವುದರೊಳಗೆ ದುರಂತ ಅಂತ್ಯ ಕಂಡಿದ್ದಾನೆ. ನಂಜನಗೂಡು ಸಮೀಪದ ದೊಡ್ಡಹೊಮ್ಮ ಗ್ರಾಮದ ನವವಿವಾಹಿತನೋರ್ವ ಚಾಮರಾಜನಗರದಲ್ಲಿ ಕೊರೊನಾ ಪರೀಕ್ಷೆ ನಡೆಸಿ ದೃಢಪಟ್ಟ ಬಳಿಕ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ರಾತ್ರಿ ಆಕ್ಸಿಜನ್ ಕೊರತೆಯಿದೆ ಎಂದು ವೀಡಿಯೋ ಕಾಲ್ ಮೂಲಕ ಸೋಂಕಿತ ಅಳಲು ತೋಡಿಕೊಂಡಿದ್ದರಂತೆ.
ವಿಡಿಯೋ ಕಾಲ್ ಮಾಡಿದ ಕೆಲವೇ ತಾಸಿನಲ್ಲಿ ಸೋಂಕಿತ ಮೃತಪಟ್ಟಿದ್ದಾನೆ. ಇವರಿಗೆ 2 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು ಎಂದು ತಿಳಿದುಬಂದಿದೆ. ಸದ್ಯ, ಕುಟುಂಬಸ್ತರು, ಪತ್ನಿ ಆಕ್ರಂದನ ಮುಗಿಲು ಮುಟ್ಟಿದೆ.