ಬೆಂಗಳೂರು: ಕಾವೇರಿ ಪ್ರಾಧಿಕಾರದ ಆದೇಶ ಪಾಲನೆ ಬೇಡ ಎಂದು ಕಾವೇರಿ ಜಲ ಸಂರಕ್ಷಣಾ ಸಮಿತಿಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ನಿರ್ಣಯವೊಂದನ್ನು ಅಂಗೀಕರಿಸಿರುವ, ಕಾವೇರಿ ಜಲ ಸಂರಕ್ಷಣಾ ಸಮಿತಿಯು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶವನ್ನು ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದು ಸರ್ಕಾರವ ಆಗ್ರಹಿಸಿದೆ.
ಕಾವೇರಿ ಬಯಲಿನ ಸಮಸ್ಯೆ ಹರಿಯಲು ಹತ್ತು ಜನರ ಅಧ್ಯಯನ ತಂಡ ರಚಿಸಿ ರಚಿಸಲಾಯಿತು ಪರಿಣಿತರು ರೈತ ಮುಖಂಡರು ಕನ್ನಡ ಸಂಘಟನೆಗಳು ಒಳಗೊಂಡಂತೆ ರಚಿಸಲಾಯಿತು ಈ ಅಧ್ಯಯನ ತಂಡ ತಲಕಾವೇರಿ
ಕೆ ಆರ್ ಎಸ್ ಜಲಾಶಯ, ಮೇಕೆದಾಟು ಬಿಳುಗುಂಡ್ಲು ಪ್ರದೇಶಗಳಿಗೆ ಹೋಗಿ ವಾಸ್ತವ ಸ್ಥಿತಿ ವರದಿ ತಯಾರಿಸಿ ನೈಜ ಚಿತ್ರಣ ಜನರಿಗೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿರುವ ಸಮಿತಿ, ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿರುವ ಕಾರಣ ಬೆಂಗಳೂರು ಜನರ ಜಾಗೃತಿಗಾಗಿ ಶೀಘ್ರದಲ್ಲಿಯೇ ಕನ್ನಡಪರ ಜನಪರ ಸಂಘಟನೆಗಳ ಸಭೆ ಕರೆಯಲು ತೀರ್ಮಾನಿಸಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬುರು ಶಾಂತಕುಮಾರ್ ತಿಳಿಸಿದ್ದಾರೆ.
ಕಾವೇರಿ ಸಮಸ್ಯೆಯ ಸಮಗ್ರ ಪರಿಚಯಕ್ಕಾಗಿ ಸರಳ ಕಿರುಹೊತ್ತಿಗೆ ತಯಾರಿಸಿ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು ಎಂದಿರುವ ಕುರುಬೂರು ಶಾಂತಕುಮಾರ್, ಸದ್ಯದಲ್ಲಿಯೇ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರನ್ನು ಭೇಟಿ ಮಾಡಿ ಸಮಸ್ಯೆಯ ಗಂಭೀರತೆ ಬಗ್ಗೆ ಅರಿವು ಮೂಡಿಸಲು ತೀರ್ಮಾನಿಸಲಾಯಿತು ಎಂದರು.
ಕಾವೇರಿ ಜಲ ಸಂರಕ್ಷಣಾ ಸಮಿತಿಯ ಸಭೆಯಲ್ಲಿ ಮುಖ್ಯಮಂತ್ರಿ ಚಂದ್ರು ರೈತ ಮುಖಂಡರಾದ ಪುಟ್ಟಸ್ವಾಮಿ, ಕ್ಯಾಪ್ಟನ್ ರಾಜಾರಾವ್, ಡಾ ಪ್ರಕಾಶ್ ಕಮರಡಿ, ಕನ್ನಡ ಸಂಘಟನೆಯ ಕುಮಾರಸ್ವಾಮಿ, ಆಂಜನೇಯ ರೆಡ್ಡಿ, ಬೈರೇಗೌಡ, ಹನುಮಾನಹಳ್ಳಿ ಶಿವಕುಮಾರ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.