ಉಡುಪಿ: ಬಿಜೆಪಿ ಯುವಮೋರ್ಚಾ ಬೈಂದೂರು ಮಂಡಲ ವತಿಯಿಂದ ಕಾರ್ಗಿಲ್ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಸಂಭ್ರಮಾಚಾರಣೆ ಗಮನಸೆಳೆಯಿತು ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ನಡೆದ ಬ್ರಹತ್ ಪಂಜಿನ ಮೆರವಣಿಗೆಯಲ್ಲಿ ನೂರಾರು ಯುವಜನರು ಭಾಗವಹಿಸಿದರು.
ಕಾರ್ಯಕ್ರಮದ ದಿಕ್ಸೂಚಿ ಭಾಷಣ ಜಿಲ್ಲಾ ಒಬಿಸಿ ಅಧ್ಯಕ್ಷರಾದ ವಿಜಯ್ ಕೊಡವೂರ್, ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಮಾತ್ರವಲ್ಲ ನಮ್ಮ ಪಾತ್ರವು ಅತ್ಯಗತ್ಯ ಎಂದರು. ಭಾರತೀಯರ ಮೊದಲ ಆದ್ಯತೆಯೇ ದೇಶ ಸೇವೆ ಆಗಬೇಕು ಅನ್ನುವ ಅರಿವು ಮೂಡಿಸಿ ಸ್ಫೂರ್ತಿದಾಯಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ನಿವೃತ ಸೈನಿಕರಿಗೆ ಮತ್ತು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ವೀರ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸದಾನಂದ್ ಉಪ್ಪಿನಕುದ್ರು, ಜಿಲ್ಲಾ ಮಹಿಳಾಮೋರ್ಚಾ ಪ್ರಧಾನಕಾರ್ಯದರ್ಶಿ ಅನಿತಾ ಮರವಂತೆ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮಂಡಲ ಉಪಾಧ್ಯಕ್ಷ ರಾಘು ನೆಂಪು, ಮಂಡಲ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಪೂಜಾರಿ, ಕಾರ್ಯದರ್ಶಿ ಕರಣ್ ಪೂಜಾರಿ, ಕೃಷ್ಣ ಖಾರ್ವಿ, ಅಶೋಕ್ ಕಂಚಿಕಾನ್, ಒಬಿಸಿ ಮೋರ್ಚಾ ಅಧ್ಯಕ್ಷ ಶಿವರಾಜ್ ಪೂಜಾರಿ,ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ಯಾಮಲಾ ಕುಂದರ್, ಬೈಂದೂರು ಯುವಮೋರ್ಚಾ ಅಧ್ಯಕ್ಷ ಗಜೇಂದ್ರ ಬೇಲೆಮನೆ, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ನೆಲ್ಯಾಡಿ, ಪ್ರವೀಣ್ ಸೋಮಯ್ಯ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಪಿ ಬೈಂದೂರು, ಅನುರ ಮೆಂಡನ್, ಯುವಮೋರ್ಚಾ ಉಪಾಧ್ಯಕ್ಷ ಜಗದೀಶ್ ಕೊಠಾರಿ, ಪ್ರದೀಪ್ ಉಪ್ಪುಂದ, ಲಕ್ಷ್ಮೀರಾಜ್ ತಲ್ಲೂರ್, ವೇಣುಗೋಪಾಲ್ ಆಜ್ರಿ, ಜಯಂತ್ ಗಂಗೊಳ್ಳಿ, ದೇವಪ್ರಕಾಶ್,ಸುಭಾಷ್,ಮಹೇಶ್ ಪೈ, ಗಿರೀಶ್ ಮೊಗವೀರ್, SC ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್, ಒಬಿಸಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ದೇವಾಡಿಗ, ಜಿಲ್ಲಾ ಒಬಿಸಿ ಕಾರ್ಯದರ್ಶಿ ಚಂದ್ರ ಜೋಗಿ, ಸುರೇಶ ಬಟ್ವಾಡಿ, ಜಯಾನಂದ್ ಹೋಬಳಿದಾರ್, ಬಾಲಚಂದ್ರ ಭಟ್ ಮುಂತಾದ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.