ಕೊಪ್ಪಳ: ದೇಶದ ಕೋಟ್ಯಾಂತರ ಕಟ್ಟಡ ನಿರ್ಮಾಣ ಕಾರ್ಮಿಕರು ನಿತ್ಯ ಅಸುರಕ್ಷಿತೆ ಮತ್ತು ಅಭದ್ರತೆ ಬದುಕಿನಲ್ಲಿ ದಿನದೂಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಆತಂಕ ವ್ಯಕ್ತಪಡಿಸಿದರು
ಕೊಪ್ಪಳ ಸಾಹಿತ್ಯ ಭವನ ನಡೆದ ಕಟ್ಟಡ ಕಾರ್ಮಿಕರ ಪ್ರಥಮ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಅಪಾಯಕಾರಿ ಸನ್ನಿವೇಶಗಳಲ್ಲಿ ಕೆಲಸ ಮಾಡುವ ಈ ಕಾರ್ಮಿಕರಿಗೆ ಸರ್ಕಾರ ಸೌಲಭ್ಯಗಳ ಜತೆ ಕೆಲಸದ ಸ್ಥಳದಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಮತ್ತು ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕನಿಷ್ಠ ಶೌಚಾಲಯ, ಕುಡಿಯುವ ನೀರು ಮಕ್ಕಳಿಗೆ ಶಿಶುಪಾಲನ ಕೇಂದ್ರ ಮತ್ತು ಅಪಘಾತಗಳಾದಾಗ ತಕ್ಷಣವೇ ವೈದ್ಯಕೀಯ ನೆರವು ಸಿಗುವಂತಾಬೇಕು. ಕಾರ್ಮಿಕರು ಮಂಡಳಿಯಿಂದ ಸಿಗುವ ಸೌಲಭ್ಯಗಳ ಜತೆಗೆ ಸುರಕ್ಷತೆಯ ಬದುಕಿಗಾಗಿ ಗಮನ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ನಿರೀಕ್ಷಕರಾದ ಶಿವಶಂಕರ್ ತಳವಾರ, ಬಾಲಕಾರ್ಮಿಕ ಜಿಲ್ಲಾ ನಿರ್ದೇಶಕ ಬಸವರಾಜ್ ಹಿರೇಗೌಡರ್ ಮಾತನಾಡಿದರು. ಜಿಲ್ಲಾ ಸಂಚಾಲಕ ಕಾಶಿಂ ಸರ್ದಾರ್ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮ ಅಧ್ಯಕ್ಷತೆ ಇಸ್ಮಾಯಿಲ್ ವಹಿಸಿದ್ದರು.
ಜಿಲ್ಲಾ ಕಾರ್ಮಿಕಾಧಿಕಾರಿ ಶ್ರೀಮತಿ ವೀಣಾಮಾಸ್ತಿ, ಕಾರ್ಮಿಕ ನಿರೀಕ್ಷಕರಾದ ಶಿವಶಂಕರ್ ತಳವಾರ, ಬಾಲಕಾರ್ಮಿಕ ಜಿಲ್ಲಾ ನಿರ್ದೇಶಕ ಬಸವರಾಜ್ ಹಿರೇಗೌಡರ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಅವರನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಿಐಟಿಯು ಅಧ್ಯಕ್ಷರಾದ ಹನುಮೇಶ್ ಕಲ್ಮಂಗಿ,ಕಾರ್ಯದರ್ಶಿ ಗೌಸ್ ಸಾಬ್‌ನಧಾಪ್, ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ಲಕ್ಷ್ಮೀದೇವಿ, ಅಂಗನವಾಡಿ ನೌಕರರ ಸಂಘದ ಅಮೃತಮ್ಮ ಬೃಹಮಠ್,ಗಂಗಾವತಿ ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಮಂಜುನಾಥ್‌ಡಗ್ಗಿ, ಕಿರ್ಲೋಸ್ಕರ್ ಫೆರಸ್ ಕಾರ್ಮಿಕ ಸಂಘದ ಕಾರ್ಯದರ್ಶಿ ಶೇಖಪ್ಪಚೌಡ್ಕೀ,ಕೂಲಿಕಾರರ ಸಂಘದ ಸುಂಕಪ್ಪ ಹಮಾಲಿ ಕಾರ್ಮಿಕ ಸಂಘಧ ನಬೀಸಾಬ್ ,ಎಸ್.ಎಫ್.ಐ ನ ಸಿದ್ದಪ್ಪ ಉಪಸ್ಥಿತರಿದ್ದು ಮಾತನಾಡಿದರು.
ನೂತನ ಸಮಿತಿ ಆಯ್ಕೆ;
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೂತನ ಸಮಿತಿಯನ್ಮು ಆಯ್ಕೆ ಮಾಡಲಾಯಿತು ಅದ್ಯಕ್ಷರಾಗಿ ಹನುಮೇಶ ಅಗಲಕೇರಾ ಪ್ರಧಾನ ಕಾರ್ಯದರ್ಶಿ ಯಾಗಿ ಕಾಶಿಂ ಸರ್ದಾರ್ ಹಾಗೂ ಖಜಾಂಚಿಯಾಗಿ ಮಹ್ಮದ್ ಸಲೀಂ ಸಹಿತ ಹದಿನೈದು ಪದಾಧಿಕಾರಿಗಳು ಆಯ್ಕೆಯಾದರು.