ಬೆಂಗಳೂರು: ಬಿಟಿಎಂ ವಿಧಾನಸಭಾ ಕ್ಷೇತ್ರ ಎಂದೊಡನೆ ಥಟ್ ಅಂತ ಮನಸ್ಸಿಗೆ ಬರೋದು ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ದತ್ತು ಪಡೆದ 23 ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು, 2 ಪಿಯು ಕಾಲೇಜುಗಳು ಒಟ್ಟು 6,100 ವಿದ್ಯಾರ್ಥಿಗಳು
“If we want to reach real peace in this world we should start educating children” ಎಂಬ ಮಹಾತ್ಮ ಗಾಂಧೀಜಿಯವರ ಈ ನುಡಿಗಳು ಜಗತ್ತಿನಲ್ಲಿ ನಿಜವಾದ ಶಾಂತಿ ಬಯಸುವುದಾದರೆ ಮಕ್ಕಳಿಗೆ ಶಿಕ್ಷಣ ನೀಡುವುದಾಗಿದೆ ಎಂಬುದು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಲೆಗಳಲ್ಲಿ ಪ್ರತಿಬಿಂಬಿಸಿದೆ.
ಶಾಸಕ ರಾಮಲಿಂಗಾರೆಡ್ಡಿ ಪ್ರತಿನಿಧಿಸುತ್ತಿರುವ ಈ ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಗಳು ಯಾವುದೇ ಕಾರ್ಪೊರೇಟ್ ಶಾಲೆಗಳಿಗೆ ಕಮ್ಮಿಯಿಲ್ಲ. ಅಲ್ಲಿನ ಆಧುನಿಕ ಸೌಲಭ್ಯಗಳು, ಸಲಕರಣೆಗಳು, ಪರಿಸರ, ತಂತ್ರಜ್ಞಾನ ಅಳವಡಿಕೆ, ಮಕ್ಕಳಿಗೆ ಸಿಗುತ್ತಿರುವ ಪಠ್ಯ ಹಾಗೂ ಪಠ್ಯೇತರ ಸೌಲಭ್ಯಗಳು ಪ್ರತಿಯೊಬ್ಬರನ್ನೂ ಆಶ್ಚರ್ಯಚಕಿತರನ್ನಾಗಿಸುತ್ತದೆ.
ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ..!
ಮನುಷ್ಯನಿಗೆ ಮೂಲಭೂತ ಅಗತ್ಯಗಳೊಡನೆ ಅತ್ಯಗತ್ಯವಾಗಿ ಬೇಕಾಗಿರುವ ಸೌಲಭ್ಯಗಳಲ್ಲಿ ಒಂದು ಶಿಕ್ಷಣ. ಈ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಗಳಿದಂಲೇ ಕಂಪ್ಯೂಟರ್ ಸಾಕ್ಷರತಾ ಶಿಕ್ಷಣ, ಸ್ಮಾರ್ಟ್ ಬೋರ್ಡ್ ವ್ಯವಸ್ಥೆ, ಮಕ್ಕಳ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳು, ಶುದ್ಧ ಕುಡಿಯುವ ನೀರಿನ ಘಟಕಗಳು, ಗ್ರಂಥಾಲಯ ಗಮನಸೆಳೆಯುತ್ತಿವೆ. ಸ್ಥಳಾವಕಾಶ ಇದ್ದ ಕಡೆಯಲ್ಲೆಲ್ಲಾ ಭೋಜನಾಲಯ, ಈಜು ಕೊಳ (CAR ಪೊಲೀಸ್ ಕ್ವಾಟರ್ಸ್ ಶಾಲೆ) ಮಕ್ಕಳಿಗೆ ಕ್ರೀಡಾ ಸಲಕರಣೆಗಳು, ಬ್ಯಾಂಡ್ ಸೆಟ್, ವಿಜ್ಞಾನ ಪ್ರಯೋಗಾಲಯ ನಿರ್ಮಿಸಲಾಗಿದೆ.
ಮುಖ್ಯೋಪಾಧ್ಯಾಯರಿಗೆ ಸುಸಜ್ಜಿತ ಕೊಠಡಿಗಳು, ಕಾಲೇಜು ಮಕ್ಕಳಿಗೆ ಸಮವಸ್ತ್ರ (2 ಜೊತೆ), ಉನ್ನತೀಕರಿಸಿದ ಶೌಚಾಲಯಗಳು, 24 ಗಂಟೆಯೂ ನೀರಿನ ವ್ಯವಸ್ಥೆ, 24 ಗಂಟೆಗಳ ವಿದ್ಯುತ್ ಸರಬರಾಜು, ಸಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್, ಆರೋಗ್ಯ ಮತ್ತು ಕಣ್ಣು ತಪಾಸಣಾ ಶಿಬಿರಗಳು, ಸ್ವಚ್ಚತಾ ಸಿಬ್ಬಂದಿ ಹಾಗೂ ಹೆಚ್ಚುವರಿ ಬೋಧಕ ಸಿಬ್ಬಂದಿಯನ್ನು ಈ ಶಾಲೆಗಳು ಹೊಂದಿವೆ ಎಂದರೆ ನಿಬ್ಬೆರಗಾಗುವಂತಹಾ ಸಂಗತಿ.
ಶಿಕ್ಷಣದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಒತ್ತು ನೀಡುವ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ ಸದ್ದುದೇಶದಿಂದ ಆಡಿಟೋರಿಯಂ ಗಳನ್ನು ಸ್ಥಾಪಿಸಲಾಗಿದೆ.
ಆಡಿಟೋರಿಯಂಗಳು:
-
ಈಜಿಪುರ ಹೈಸ್ಕೂಲ್
-
ವೆಂಕಟಪುರ ಶಾಲೆ
-
ರಾಜೇಂದ್ರನಗರ ಶಾಲೆ
-
ಅಡುಗೋಡಿ ಕಾಲೇಜು
-
ಅಡುಗೋಡಿ ಹೈಸ್ಕೂಲ್
-
ಜಕ್ಕಸಂದ್ರ
-
. ಕೋರಮಂಗಲ
-
ಈಜಿಪುರ ಪ್ರಾಥಮಿಕ ಶಾಲೆ
-
ಮಡಿವಾಳ ಹೈಸ್ಕೂಲ್
-
ಮಡಿವಾಳ ಕಾಲೇಜು
-
ಎಸ್ ಜಿ ಪಾಳ್ಯ ಶಾಲೆ
-
ತಾವರೇಕೆರೆ ಶಾಲೆ
-
ತಾವರೇಕೆರೆ ಉರ್ದು ಶಾಲೆ
-
ವಿ ಪಿ ರಸ್ತೆ ಉರ್ದು ಶಾಲೆ, ಮಡಿವಾಳ
ಕಾಲೇಜು ವಿದ್ಯಾರ್ಥಿಗಳ ಪೋಷಕರಿಗೆ ಹೊರೆಯಾಗದಿರಲೆಂದು ಬಿಟಿಎಂ ವ್ಯಾಪ್ತಿಯ ಮಡಿವಾಳ, ಈಜಿಪುರ ಹಾಗೂ ಆಡುಗೋಡಿಯ 3 ಸರ್ಕಾರಿ ಪ್ರೌಢ ಶಾಲೆ ಹಾಗೂ 2 ಕಾಲೇಜುಗಳ ವಿದ್ಯಾರ್ಥಿಗಳ ಶಾಲಾ ಶುಲ್ಕ ಹಾಗೂ ಪರೀಕ್ಷಾ ಶುಲ್ಕವನ್ನು ಪಾವತಿಸುವ ಹೊಣೆಯನ್ನೂ ಸಾರಿಗೆ ಸಚಿವರೇ ವಹಿಸಿಕೊಂಡಿದ್ದಾರೆ.
ಆಡುಗೋಡಿ ಹಾಗೂ ಮಡಿವಾಳದ ಶಾಲಾ ಆವರಣದೊಳಗೆ 2 ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉಚಿತ ಬ್ಯಾಗ್ ಗಳು ಹಾಗೂ ಪುಸ್ತಕಗಳ ವಿತರಣೆ ಕಾರ್ಯಕ್ರಮ ಕೂಡ ಪ್ರತಿ ವರ್ಷ ನಡೆಯುತ್ತದೆ.
ಈ ಶಾಲೆಗಳಿಗೆ NPS ಸಮೂಹ ವಿದ್ಯಾ ಸಂಸ್ಥೆಗಳ ಸ್ಥಾಪಕರಾದ ಶ್ರೀ. ಗೋಪಾಲಕೃಷ್ಣ ರವರು, PES ವಿಶ್ವವಿದ್ಯಾಲಯ ಹಾಗೂ ಖ್ಯಾತ ಶಿಕ್ಷಣ ತಜ್ಞ ದೊರೆಸ್ವಾಮಿ, ಕ್ರೈಸ್ಟ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ Father ಅಬ್ರಾಹಂ ಹಾಗೂ ಇತರೆ ಶಿಕ್ಷಣ ತಜ್ಞರುಗಳು ಭೇಟಿ ನೀಡಿ ಶಾಲೆಗಳಲ್ಲಿ ಮಕ್ಕಳಿಗೆ ದೊರೆಯುತ್ತಿರುವ ಸೌಲಭ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ, ರಾಮಲಿಂಗಾರೆಡ್ಡಿ ಅವರ ಶಿಕ್ಷಣ ಪರ ಕಳಕಳಿ ಹಾಗೂ ಕಾಳಜಿ ಇತರೆ ಜನಪ್ರತಿನಿಧಿಗಳಿಗೆ ಆದರ್ಶ ಹಾಗೂ ಮಾದರಿಯೆಂದು ಈ ಗಣ್ಯರು ಕೊಂಡಾಡಿದ್ದಾರೆ.