ರಿಯೊ ಡಿ ಜನೈರೊ: ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಭೇಟಿಗಾಗಿ ಶನಿವಾರ ಬ್ರೆಜಿಲ್ ತಲುಪಿದಾಗ ಅಲ್ಲಿನ ಭಾರತೀಯ ಸಮುದಾಯದ ಸದಸ್ಯರಿಂದ ಭವ್ಯ ಸ್ವಾಗತ ಸಿಕ್ಕಿದೆ.
“ಬ್ರೆಜಿಲ್‌ನ ಭಾರತೀಯ ಸಮುದಾಯದವರು ರಿಯೊ ಡಿ ಜನೈರೊದಲ್ಲಿ ಬಹಳ ರೋಮಾಂಚಕ ಸ್ವಾಗತವನ್ನು ನೀಡಿದರು. ಅವರು ಭಾರತೀಯ ಸಂಸ್ಕೃತಿಯೊಂದಿಗೆ ಸಂಪರ್ಕದಲ್ಲಿರುವುದರ ಜೊತೆಗೆ ಭಾರತದ ಅಭಿವೃದ್ಧಿಯ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ ಎಂಬುದು ಅದ್ಭುತವಾಗಿದೆ! ಸ್ವಾಗತದ ಕೆಲವು ಝಲಕ್‌ಗಳು ಇಲ್ಲಿವೆ…” ಎಂದು ಪ್ರಧಾನಿ ಮೋದಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಗ್ಗೆ ಸಂತಸ ಹಂಚಿಕೊಂಡ ಬ್ರೆಸಿಲ್ ನಲ್ಲಿರುವ ಭಾರತೀಯರು “ಇದು ಅದ್ಭುತ ಅನುಭವ. ಅವರನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಯಿತು. ಅವರು ನನ್ನ ಮಗಳನ್ನು ಸಹ ಆಶೀರ್ವದಿಸಿದರು ಮತ್ತು ನಿಧಾನವಾಗಿ ಅವರ ತಲೆಯ ಮೇಲೆ ಕೈ ಇಟ್ಟರು…” ಎಂದರು.
‘ಇಂತಹ ಮಹಾನ್ ನಾಯಕರನ್ನು ಮೊದಲ ಬಾರಿಗೆ ಭೇಟಿಯಾದದ್ದು ಅದ್ಭುತ ಅನುಭವ. ಪ್ರಧಾನಿ ಅವರನ್ನು ಮುಖಾಮುಖಿಯಾಗಿ ಭೇಟಿಯಾಗುವ ಅವಕಾಶ ಯಾರಿಗೆ ಸಿಗುತ್ತದೆ? ಅವರನ್ನು ಹತ್ತಿರದಿಂದ ನೋಡಿ ನನಗೆ ನಿಜವಾಗಿಯೂ ಸಂತೋಷ ಮತ್ತು ಗೌರವವಾಯಿತು…’ ಎಂದೂ ಕೆಲವರು ಹೇಳಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ, ಭಾರತೀಯ ಯುವಕನೊಬ್ಬ, ‘ನಾನು ಅವರ ಪಾದಗಳನ್ನು ಮುಟ್ಟಿದೆ ಮತ್ತು ನೃತ್ಯದ ಬಗ್ಗೆ ಬಹಳಷ್ಟು ಕಲಿತಿದ್ದೇನೆ. ಇದು ನಿಜವಾಗಿಯೂ ಅದ್ಭುತ ಅನುಭವವಾಗಿತ್ತು…’ ಎಂದು ಹೇಳಿದರು.
ಈ ನಡುವೆ, ರಿಯೊ ಡಿ ಜನೈರೊದಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ಪ್ರದರ್ಶನ ನೀಡಿದ ಕಲಾವಿದರನ್ನೂ ಪ್ರಧಾನಿ ಮೋದಿ ಭೇಟಿಯಾದರು. ‘ಪ್ರಧಾನಿ ಮೋದಿ ನಿಜವಾಗಿಯೂ ಪ್ರದರ್ಶನವನ್ನು ಆನಂದಿಸುತ್ತಿರುವುದನ್ನು ನೋಡುವುದು ನಮಗೆ ತುಂಬಾ ಭರವಸೆ ಮತ್ತು ಸಂತೋಷವನ್ನು ನೀಡಿತು. ಅವರು ನಮ್ಮೆಲ್ಲರೊಂದಿಗೆ ಕೈಕುಲುಕಿದರು ಮತ್ತು ವೈಯಕ್ತಿಕವಾಗಿ ನಮಗೆ ಧನ್ಯವಾದ ಹೇಳಿದರು – ಇದು ಬಹಳ ವಿಶೇಷ ಕ್ಷಣವಾಗಿತ್ತು…’ ಎಂದು ಕಲಾವಿದರು ಹೇಳಿಕೊಂಡಿದ್ದಾರೆ.