ಪದವೀಧರರಿಗೆ ಉದ್ಯೋಗಾವಕಾಶ. ಬ್ಯಾಂಕ್ ಆಫ್ ಬರೋಡಾದ ಅಂಗಸಂಸ್ಥೆ BOB Capital Markets Ltd ದೇಶದ ವಿವಿಧ ವಲಯಗಳಲ್ಲಿ 103 ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.
ಉತ್ತರ ವಲಯಕ್ಕೆ 37, ಪಶ್ಚಿಮಕ್ಕೆ 44, ದಕ್ಷಿಣ–ಪೂರ್ವ ವಲಯಗಳಿಗೆ 22 ಹುದ್ದೆಗಳು ಮೀಸಲಿರುತ್ತವೆ.
ಅರ್ಹತೆ:
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ ಅಗತ್ಯ
- ಬಂಡವಾಳ ಮಾರುಕಟ್ಟೆ ಕ್ಷೇತ್ರದಲ್ಲಿ ಕನಿಷ್ಠ 6 ತಿಂಗಳ ಅನುಭವ ಕಡ್ಡಾಯ
- ಡಿಮ್ಯಾಟ್ ಖಾತೆ, ಟ್ರೇಡಿಂಗ್ ಅಕೌಂಟ್ ಹಾಗೂ ಸೇಲ್ಸ್ ಬ್ರೋಕಿಂಗ್ ವಿಭಾಗದಲ್ಲಿ ಅನುಭವಿಗಳಿಗೆ ಆದ್ಯತೆ
- ಉತ್ತಮ ಕಮ್ಯುನಿಕೇಶನ್ ಹಾಗೂ ಮಾರ್ಕೆಟಿಂಗ್ ಕೌಶಲ್ಯ ಇದ್ದರೆ ಹೆಚ್ಚುವರಿ ಪ್ಲಸ್
ಕೆಲಸದ ಸ್ಥಳ: ಹೈದರಾಬಾದ್, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಕೇರಳ ಸೇರಿದಂತೆ ದೇಶದ ಪ್ರಮುಖ ಶಾಖೆಗಳಲ್ಲಿ.
ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನ.
ಅರ್ಹ ಅಭ್ಯರ್ಥಿಗಳು ತಮ್ಮ ವಿವರಗಳನ್ನು careers@bobcaps.in ಈ ಇಮೇಲ್ಗೆ ಕಳುಹಿಸಬೇಕು. ಇಮೇಲ್ ಕಳುಹಿಸುವಾಗ “Application for Business Development Manager (Off-Role)” ಎಂದು ಸಬ್ಜೆಕ್ಟ್ನಲ್ಲಿ ಬರೆಯುವುದು ಕಡ್ಡಾಯ.
ನೇಮಕಾತಿ ಅಧಿಸೂಚನೆ ಹಾಗೂ ಹೆಚ್ಚಿನ ವಿವರಕ್ಕಾಗಿ ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
















































