ಬೆಂಗಳೂರು: ಟಿಪ್ಪು ಬಗೆಗಿನ ಕಾಂಗ್ರೆಸ್ಗಿರುವ ಅಭಿಮಾನ, ಬಿಜೆಪಿಗಿರುವ ಆಕ್ರೋಶವು ರಾಜಕೀಯ ಜಟಾಪಟಿಗೆ ಕಾರಣವಾಗುತ್ತಿವೆ. ಕೊಡಗಿನ ಇತಿಹಾಸ, ದೇಗುಲಗಳ ನಾಶದಂತಹಾ ಕಹಿ ಘಟನೆಗಳ ಹಿನ್ನೆಲೆಯಲ್ಲಿ ಒಂದು ಗುಂಪು ಟಿಪ್ಪು ಬಗ್ಗೆ ಕಿಡಿ ಕಾರಿದರೆ, ಇನ್ನೊಂದು ಗುಂಪು ಟಿಪ್ಪು ಅನುಯಾಯಿಗಳನ್ನು ಓಲೈಸುವ ಪ್ರಯತ್ನದಲ್ಲಿದೆ.
ಈ ಟಿಪ್ಪು ಬಗ್ಗೆ ಆಗಾಗ್ಗೆ ಹೊಗಳುತ್ತಾ ಬಿಜೆಪಿಯನ್ನು ಕೆಣಕುತ್ತಿರಿವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ‘ಸಿದ್ರಾಮುಲ್ಲಾ ಖಾನ್’ ಎಂದು ಟೀಕಿಸುತ್ತಿದ್ದಾರೆ. ಇದಕ್ಕೆ ಎದಿರೇಟು ನೀಡಿರುವ ಕಾಂಗ್ರೆಸ್ ಪಕ್ಷ, ಬಿಜೆಪಿಯಲ್ಲೂ ಸಾಕಷ್ಟು ಮಂದಿ ಖಾನ್ಗಳಿದ್ದಾರೆ ಎಂದು ಟೀಕಿಸಿವೆ. ಈ ಕುರಿತಂತೆ ಕಾಂಗ್ರೆಸ್ ಮಾಟಿರುವ ಸರಣಿ ಟ್ವೀಟ್ಗಳು ಕುತೂಹಲದ ಕೇಂದ್ರಬಿಂದುಗಳಾಗಿವೆ.
ಟಿಪ್ಪು ಬಗ್ಗೆ ತೆಗಳುತ್ತಿರುವ ಬಿಜೆಪಿ ನಾಯಕರು, ಒಂದೊಮ್ಮೆ ಟಿಪ್ಪು ವೇಷದಲ್ಲಿ ಮಿಂಚಿರುವುದು ಸುಳ್ಳಲ್ಲ. ಈ ಕಾರಣಕ್ಕಾಗಿಯೇ ಬಹಳಷ್ಟು ಬಿಜೆಪಿ ನಾಯಕರ ಒಳಮರ್ಮ ಆ ಪಕ್ಷದ ಕಾರ್ಯಕರ್ತರಿಗೆ ಗೊತ್ತಾಗಿದ್ದು, ಈ ಸೇನಾನಿಗಳು ಆಕ್ರೋಶವನ್ನೂ ಹೊರಹಾಕಿದ್ದುಂಟು. ಈ ನಡುವೆ ಕಾಂಗ್ರೆಸ್ ಪಕ್ಷವು ಬಿಜೆಪಿ ಧುರೀಣರು ಮುಸ್ಲಿಮರ ವೇಷದಲ್ಲಿ ಕಾಈಕೊಂಡ ಫೊಟೋಗಳನ್ನು ಹಾಕಿ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಫೊಟೋ ಪೋಸ್ಟ್ ಮಾಡಿರುವ ಕಾಂಗ್ರೆಸ್, ಶೆಟ್ಟರ್ ಅವರನ್ನು ‘ಜಬ್ಬಾರ್ ಖಾನ್’ ಎನ್ನಬಹುದೇ ಎಂದು ಪ್ರಶ್ನಿಸಿದೆ. ಆರ್ ಅಶೋಕ್ ಅವರ ಫೊಟೋ ಪ್ರದರ್ಶಿಸಿ ಇವರನ್ನು”ಅಶ್ವಾಖ್ ಇನಾಯತ್ ಖಾನ್” ಎಂದು ಹೆಸರಿಡುತ್ತೀರಾ ಎಂದು ಕಮಲ ಪಕ್ಷವನ್ನು ಪ್ರಶ್ನಿಸಿದೆ.
ಇವರಿಗೆ "ಜಬ್ಬಾರ್ ಖಾನ್"
"ಅಶ್ವಾಖ್ ಇನಾಯತ್ ಖಾನ್" ಎಂದು ಹೆಸರಿಡುತ್ತೀರಾ @CTRavi_BJP ? pic.twitter.com/91HcuOVxb1— Karnataka Congress (@INCKarnataka) December 6, 2022
ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ, ಪ್ರಸಕ್ತ ಕೇಂದ್ರ ಸಚಿವರಾಗಿರುವ ನಿತಿನ್ ಗಡ್ಜರಿ ಅವರೂ ಮುಸ್ಲಿಂ ವೇಷದಲ್ಲಿರುವ ಫೊಟೋ ಗಮನಸೆಳೆದಿದೆ. ಇವರನ್ನು ‘ಮಹಮದ್ ಗಡ್ಕರಿ ಶೇಕ್’ ಎಂದು ಮರುನಾಮಕರಣ ಮಾಡುವಿರಾ ಎಂದು ಬಿಜೆಪಿ ನಾಯಕರನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಇವರಿಗೆ ಮಹಮದ್ ಗಡ್ಕರಿ ಶೇಕ್ ಎಂದು ಮರುನಾಮಕರಣ ಮಾಡುವಿರಾ @BJP4Karnataka? pic.twitter.com/gvEhZEuJna
— Karnataka Congress (@INCKarnataka) December 6, 2022
ಇವರಷ್ಟೇ ಅಲ್ಲ, ಸಿಎಂ ಬಸವರಾಜ್ ಬೊಮ್ಮಾಯಿ ಕೂಡಾ ಒಂದೊಮ್ಮೆ ಮುಸ್ಲಿಮರ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರಂತೆ. ಈ ಪೊಟೋವನ್ನೂ ವೈರಲ್ ಮಾಡಿರುವ ಕಾಂಗ್ರೆಸ್, ಇವರನ್ನು “ಬೊಮ್ಮಾಯುಲ್ಲಾ ಖಾನ್” ಎಂದು ಕರೆಯಬಹುದೇ ಎಂದು ಅಪ್ಪಣೆ ಕೇಳಿರುವ ವೈಖರಿಯೂ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.
ಇವರನ್ನು "ಬೊಮ್ಮಾಯುಲ್ಲಾ ಖಾನ್" ಎಂದು ಕರೆಯಬಹುದೇ @BJP4Karnataka? pic.twitter.com/XXRI64IYRt
— Karnataka Congress (@INCKarnataka) December 6, 2022