ದೆಹಲಿ: ರಾಜ್ಯ ರಾಜಕೀಯದಲ್ಲಿ ಭರ್ಜರಿ ರಾಜಕೀಯ ವಿದ್ಯಮಾನಗಳು ಗರಿಗೆದರಿದ್ದು ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಬಿಜೆಪಿ ಹೈಕಮಾಂಡ್ ಪ್ರಮುಖರನ್ನು ಭೇಟಿಯಾಗಿ ಗಮನಸೆಳೆದಿದ್ದಾರೆ.
ಸಿಎಂ ಬದಲಾವಣೆಯ ‘ಗುಮ್ಮ’ ಬಿಎಸ್‌ವೈ ಆಪ್ತರನ್ನು ಕಾಡುತ್ತಿದಂತೆಯೇ ಸಚಿವ ಯೋಗೇಶ್ವರ್ ಅವರ ರಣಕಹಳೆ ಕಮಲ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ. ಅದಾಗಲೇ ದೆಹಲಿಗೆ ತೆರಳಿದ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆದ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಕುತೂಹಲದ ಕೇಂದ್ರ ಬಿಂದುವಾಗಿದ್ದರು. ಸದ್ಯಕ್ಕೆ ಸಿಂ ಬದಲಾವಣೆ ಇಲ್ಲ ಎಂಬ ಸಂದೇಶ ಅರುಣ್ ಸಿಂಗ್ ಅವರಿಂದಲೇ ವ್ಯಕ್ತವಾಯಿತು.
ಗುರುವಾರ ವಿಜಯೇಂದ್ರ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನೂ ಭೇಟಿಯಾಗಿ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದರು. ಅವರಿಂದ ಕೆಲವು ಸಲಹೆಗಳನ್ನೂ ಪಡೆದರು.
ರಾಜ್ಯ ರಾಜಕಾರಣದ ಬೆಳವಣಿಗೆಯ ನಡುವೆ ಪಕ್ಷದ ಅನೇಕ ಸಚಿವರು, ಶಾಸಕರು, ನಾಯಕರು ಹೈಕಮಾಂಡ್ ಭೇಟಿಗೆ ಪ್ರಯತ್ನಿಸಿದ್ದರಾದರೂ ಅವಕಾಶ ಸಿಗುತ್ತಿರಲಿಲ್ಲ. ಆದರೆ ಹೈಕಮಾಂಡ್ ನಾಯಕರನ್ನು ಭೇಟಿಯಾಗುವಲ್ಲಿ ವಿಜಯೇಂದ್ರ ಯಶಸ್ವಿಯಾಗಿರುವುದು ರಾಜ್ಯದ ಅತೃಪ್ತ ನಾಯಕರ ಹುಬ್ಬೇರುವಂತೆ ಮಾಡಿದೆ.
ಈ ನಡುವೆ, ಹೈಕಮಾಂಡ್ ಭೇಟಿ ಬಗ್ಗೆ ಟ್ವೀಟ್ ಮಾಡಿರುವ ವಿಜಯೇಂದ್ರ, ನಮ್ಮ ಪಕ್ಷದ ಹೆಮ್ಮೆಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ಜೀಯವರನ್ನು ಭೇಟಿಯಾದ ವೇಳೆ ‘ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಕಾರ್ಯಕರ್ತರು ಜನರ ದುಃಖ-ದುಮ್ಮಾನಗಳಿಗೆ ಸ್ಪಂದಿಸಬೇಕಾದ ರೀತಿಯ ಕುರಿತು ಅವರಿಂದ ಪಡೆದ ಸಲಹೆ, ಮಾರ್ಗದರ್ಶನ ನನ್ನಲ್ಲಿ ಇನ್ನಷ್ಚು ಉತ್ಸಾಹ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದಿದ್ದಾರೆ.
ಇಂದು ನಮ್ಮ ಪಕ್ಷದ ಹೆಮ್ಮೆಯ ರಾಷ್ಟ್ರೀಯಅಧ್ಯಕ್ಷರಾದ ಮಾನ್ಯ ಜೆ.ಪಿ. ನಡ್ಡಾ ಜೀಯವರನ್ನು ಭೇಟಿಯಾದ ವೇಳೆ ‘ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಕಾರ್ಯಕರ್ತರು
ಜನರ ದುಃಖ-ದುಮ್ಮಾನಗಳಿಗೆ ಸ್ಪಂದಿಸಬೇಕಾದ ರೀತಿಯ ಕುರಿತು ಅವರಿಂದ ಪಡೆದ ಸಲಹೆ, ಮಾರ್ಗದರ್ಶನ ನನ್ನಲ್ಲಿ ಇನ್ನಷ್ಚು ಉತ್ಸಾಹ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿದೆ.@JPNadda pic.twitter.com/AEsXFVvHKL— Vijayendra Yediyurappa (Modi Ka Parivar) (@BYVijayendra) June 3, 2021