ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಅಭಿಮಾನಿಗಳನ್ನು ಸಂಪಾದಿಸಿರುವ ರಜತ್ ಹಾಗೂ ವಿನಯ್ ಗೌಡ ‘ಒಂದು ಮಚ್ಚಿನ ಕಥೆ’ಯಿಂದಾಗಿ ವಿಲನ್ ಎನಿಸಿಕೊಂಡರು. ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಹಕ್ಕಿಗಳಾದ ಈ ಇಬ್ಬರು ಸೆಲೆಬ್ರೆಟಿಗಳು ಇದೀಗ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಬಿಡುಗಡೆಯಾಗಿರುವ ವಿನಯ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಅವರು ಕ್ಷಮೆಕೋರಿದ್ದಾರೆ.
View this post on Instagram
‘ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದಿರುವ ವಿನಯ್, ಮಚ್ಚು ಇಡ್ಕೊಂಡು ವಿಡಿಯೋ ಮಾಡಬಾರದಿತ್ತು. ಇದರಿಂದ ತೊಂದರೆ ಆಗಿದೆ. ನನ್ನಿಂದ ತಪ್ಪಾಗಿದೆ’ ಎಂದಿದ್ದಾರೆ.
ಇದು ಇಷ್ಟು ದೊಡ್ಡ ಸಮಸ್ಯೆ ತಂದುಕೊಡುತ್ತದೆ ಅಂಥ ಅಂದ್ಕೊಡಿರಲಿಲ್ಲ. ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಾಗಿತ್ತು. ನಾನು ಈ ರೀತಿ ಮೆಸೇಜ್ ನನ್ನ ಫಾಲೋವರ್ಸ್‌ಗೆ ಕೊಡಬಾರದಿತ್ತು ಕ್ಷಮಿಸಿ’ ಎಂದವರು ಹೇಳಿರುವ ವೀಡಿಯೋ ಗಮನಸೆಳೆದಿದೆ.