ಬೆಂಗಳೂರು: ನಾಡು ಕಂಡ ಅಪರೂಪದ ಆಡಳಿತಗಾರ, ಅಭಿವೃದ್ಧಿಯ ಹರಿಕಾರ ಕೆ.ಸಿ.ರೆಡ್ಡಿ ಅವರ ಜನ್ಮದಿನವನ್ನು ಇಂದು ಆಚರಿಸಲಾಯಿತು. ಸಮಾಹಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಲಾಯಿತು.
ಸ್ವಾತಂತ್ರ್ಯ ಸಂಗ್ರಾಮ ಹಾಗೂ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆಗಾಗಿ ನಡೆದ ಚಟುವಟಿಕೆಗಳೆರಡರಲ್ಲೂ ಮುಂಚೂಣಿಯ ಪಾತ್ರವಹಿಸಿದ ಕೆ ಸಿ.ರೆಡ್ಡಿಯವರು ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಎಂದೇ ಖ್ಯಾತರಾದವರು.
ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಕೆ.ಸಿ.ರೆಡ್ಡಿ ಅವರ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದ ಅವರ ಪ್ರತಿಮೆಯ ಬಳಿ ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ಅವರೊಂದಿಗೆ ಕೆ.ಸಿ.ರೆಡ್ಡಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಎಚ್.ಕೆ ಪಾಟೀಲ್, ಶ್ರೀ ಪ್ರಕಾಶ್ ಕೋಳಿವಾಡ, ಶ್ರೀ ಕೋನರಡ್ಡಿ,… pic.twitter.com/Ed9KAd0eUo
— Ramalinga Reddy (@RLR_BTM) February 27, 2024
ಶ್ರೀಯುತರ ಪುತ್ಥಳಿಯನ್ನು ವಿಧಾನಸೌಧದಲ್ಲಿ ಪ್ರತಿಷ್ಠಾಪಿಸಬೇಕೆಂದು.ರಾಮಲಿಂಗಾರೆಡ್ಡಿ ಹಾಗೂ. ಹೆಚ್.ಕೆ.ಪಾಟೀಲ್ ರವರು 2017ರಲ್ಲಿ ಸರ್ಕಾರದ ಮೇಲೆ ಒತ್ರಡ ತಂದಿದ್ದರು. ಆಗಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಈ ನಾಯಕರ ಮನವಿಗೆ ಸ್ಪಂಧಿಸಿ ವಿಧಾನಸೌಧದಲ್ಲಿ ಕೆ.ಸಿ.ರೆಡ್ಡಿಯವರ ಪುತ್ಥಳಿಯನ್ನು ಅನಾವರಣಗೊಳಿಸಿ್ದರು.
-
ಕ್ಯಾಸಂಬಳ್ಳಿ ಚೆಂಗಲರಾಯರೆಡ್ಡಿ (ಕೆ.ಸಿ.ರೆಡ್ಡಿ) ಅವರು 25 ಅಕ್ಟೋಬರ್ 1947 ರಿಂದ 30 ಮಾರ್ಚ್ 1952 ರವರೆಗ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಗಳಾಗಿದ್ದರು.
-
1936ರಲ್ಲಿ ಗಾಂಧೀಜಿ ಭೇಟಿ ನೀಡಿದ ಸಂದರ್ಭದಲ್ಲಿ.ಕೆ.ಸಿ.ರೆಡ್ಡಿರವರು ಹಲವಾರು ಬಾರಿ ಗಾಂಧೀಜಿಯವರನ್ನು ಭೇಟಿ ಮಾಡಿದ್ದರು.
-
1952ರ ನಂತರ ರಾಜ್ಯಸಭಾ ಸದಸ್ಯರಾಗಿ ನೆಹರೂ ಸಂಪುಟದಲ್ಲಿ ಕೇಂದ್ರ ಉತ್ಪಾದನಾ ಸಚಿವರಾಗಿ, ಮತ್ತು 1957ರಲ್ಲಿ ಲೋಕಸಭೆಗೆ ಆಯ್ಕೆಯಾಗಿ ಕಾಮಗಾರಿ, ವಸತಿ ಹಾಗೂ ಪೂರೈಕೆ ಶಾಖೆ ಸಚಿವರಾಗಿದ್ದರು,
-
1960ರಲ್ಲಿ ವಾಣಿಜ್ಯ ಕೈಗಾರಿಕೆಗಳ ಮಂತ್ರಿಯಾಗಿ, 1962 ರವರೆಗೂ ಮುಂದುವರಿದರು.
-
ಲೋಕಸಭೆಯಲ್ಲಿ ಉಪನಾಯಕರಾಗಿಯೂ ಆಯ್ಕೆಯಾಗಿದ್ದರು.
-
1964 ರಿಂದ 1971ರವರೆಗೂ ಮಧ್ಯಪ್ರದೇಶದಲ್ಲಿ ರಾಜ್ಯಪಾಲರಾಗಿದ್ದರು.
ಕೇಂದ್ರ ಸರ್ಕಾರದ ಸಚಿವರಾಗಿದ್ದಾಗ ಬೆಂಗಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ (ITI) ಹಾಗೂ ಹಿಂದುಸ್ಥಾನ ಮೆಷೀನ್ ಟೂಲ್ಸ್ (HMT) ಹಾಗೂ ಭಾರತ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಮೈಸೂರಿನ ಸೆಂಟ್ರಲ್ ಫುಡ್ ಟೆಕ್ನೋಲಾಜಿಕಲ್ ರೀಸರ್ಚ್ ಇನ್ಸ್ಟಿಟ್ಯೂಟ್ (CFTRI), ಕೋಲಾರದ ಭಾರತ್ ಅರ್ಥ ಮೂವರ್ಸ್ ಲಿಮಿಟೆಡ್ (BEML) ಹಾಗೂ ಶಿವಮೊಗ್ಗದ ಜೋಗ ಜಲಪಾತದಡಿಯಲ್ಲಿ ಮಹಾತ್ಮಗಾಂಧಿ ಹೈಡ್ರೋ ಎಲೆಕ್ಟಿಕ್ ಸ್ಟೇಷನ್ ಸ್ಥಾಪನೆಯಲ್ಲಿ ಕೆ.ಸಿ. ರೆಡ್ಡಿ ಅವರ ಪರಿಶ್ರಮವಿತ್ತು.
ಕೇಂದ್ರ ಸಚಿವರಾಗಿ ಅಂದಿನ ಮಧ್ಯಪ್ರದೇಶದ (ಇಂದಿನ ಛತ್ತೀಸ್ ಗಡದ) ಬಿಲಾಯ್, ಒರಿಸ್ಸಾದ ರೊರ್ಕೆಲಾ ಮತ್ತು ಅಂದಿನ ಬಿಹಾರದ (ಇಂದಿನ ರಾಂಚಿಯಲ್ಲಿ) ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ತಮಿಳುನಾಡಿನ ನೈವೇಲಿಯಲ್ಲಿ ಲಿಗ್ನೈಟ್ ಕಾರ್ಖಾನೆಯ ಸ್ಥಾಪನೆಗೆ ಕಾರಣರಾಗಿ ನಾಡು ಕಟ್ಟಿದವರು.
ಕೆ.ಸಿ. ರೆಡ್ಡಿಯವರ ಜಯಂತಿಯಾದ ಇಂದು ಸಿಎಂ ಸಿದ್ಧರಾಮಯ್ಯ, ಸಚಿವರಾದ ರಾಮಲಿಂಗ ರೆಡ್ಡಿ,, ಹೆಚ್.ಕೆ. ಪಾಟೀಲ್, ಮತ್ತು ಕೆ.ಸಿ.ರೆಡ್ಡಿಯವರ ಮೊಮ್ಮಗಳಾದ ಕವಿತಾ ರೆಡ್ಡಿ, ಸಹಿತ ಗಣ್ಯರ ಉಪಸ್ಥಿತಿಯಲ್ಲಿ ವಿಧಾನಸೌಧದಲ್ಲಿ ಕೆ.ಸಿ. ರೆಡ್ಡಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.