ಬೆಂಗಳೂರು: ಲೋಕಸಭಾ ಚುನಾವಣಾ ಅಖಾಡ ಇದೀಗ ಹೈವೋಲ್ಟೇಜ್ ಪ್ರಚಾರಕ್ಕೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಜಾರದ ಸಚಿವ ರಾಮಲಿಂಗ ರೆಡ್ಡ ಪುತ್ರಿ ಸೌಮ್ಯ ರೆಡ್ಡಿ ನಡುವಿನ ಸ್ಪರ್ಧೆಯಿಂದಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಭರ್ಜರಿ ವಿದ್ಯಮಾನದ ಕಣವಾಗಿ ಮಾರ್ಪಟ್ಟಿದೆ.
ಅನಂತ್ ಕುಮಾರ್ ಕಾಲದಿಂದಲೂ ಬಿಜೆಪಿಯ ಭದ್ರಕೋಟೆಗೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಲಗ್ಗೆ ಹಾಕಿದ್ದು, ಅವರ ಪ್ರಚಾರದ ಮೋಡಿ ಜನರ ಚಿತ್ತ ಸೆಳೆಯುತ್ತಿದೆ. ಸಚಿವ ರಾಮಲಿಂಗ ರೆಡ್ಡಿ ಜೊತೆಗೂಡಿ ಸೌಮ್ಯ ನಡೆಸುತ್ತಿರುವ ಪ್ರಚಾರದುದ್ದಕ್ಜೂ ಜನಸಾಗರವೇ ನೆರೆಯುತ್ತಿದ್ದು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ‘ಸೌಮ್ಯ ಮೇನಿಯಾ’ ಸೃಷ್ಟಿಯಾದಂತಿದೆ.
‘ನಮ್ಮ ಪಕ್ಷವನ್ನು ತೆಲಂಗಾಣದಲ್ಲಿ ಭರ್ಜರಿ ಬಹುಮತದಿಂದ ಗೆಲ್ಲಿಸುವ ಮೂಲಕ ಹೊಸ ಪರ್ವವನ್ನು ಆರಂಭಿಸಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ರೋಡ್ ಶೋ ವೇಳೆ ಜೊತೆಗೂಡುವ ಮೂಲಕ ನನಗೆ ಶಕ್ತಿ ತುಂಬಿದರು. ನಮ್ಮ ಕಾರ್ಯಕರ್ತರಿಗೆ ಹೊಸ ಹುರುಪನ್ನು ತಂದರು’ ಎಂದು ಸೌಮ್ಯ ರೆಡ್ಡಿ ಸಂತಸ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕರಾದ ವಿ.ಎಸ್. ಉಗ್ರಪ್ಪ, ಉಮಾಪತಿ ಗೌಡ, ನಾಗಭೂಷಣ ರೆಡ್ಡಿ, ಮಾಜಿ ಪಾಲಿಕೆ ಸದಸ್ಯರು, ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದ್ದರು.