ಬೆಂಗಳೂರು: ಉತ್ತರ ಬೆಂಗಳೂರಿನ ಬಡಾವಣೆಗಳನ್ನು ರಾಜಧಾನಿಗೆ ಸಂಪರ್ಕಿಸುವ ಹೆಬ್ಬಾಳ ಮೇಲ್ಸೇತುವೆಯಲ್ಲಿ ಬಿಡಿಎ ವತಿಯಿಂದ ಕೈಗೊಂಡಿದ್ದ 2ನೇ ಲೂಪ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಸದ್ಯ ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ.
ಮೇಲ್ಸೇತುವೆಯ ವೀಡಿಯೊವನ್ನು ಬಿಡುಗಡೆ ಮಾಡಿರುವ ಪ್ರಾಧಿಕಾರ, ಹೊಸ ಲೂಪ್ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದೆ. ಉತ್ತರ ಬೆಂಗಳೂರಿನಿಂದ ನಗರ ಪ್ರವೇಶ ಸುಲಭ ವಾಗಲಿದೆ. ಯಲಹಂಕ, ಜಕ್ಕೂರು, ಸಹಕಾರನಗರದಿಂದ ಮೇಖ್ರಿ ಸರ್ಕಲ್ ವರೆಗೆ ತಡೆರಹಿತ ಸಂಚಾರ ಸಾಧ್ಯವಿದೆ. ಈ ಮಾರ್ಗದಲ್ಲಿ ಶೇ 25ರಷ್ಟು ಸಂಚಾರ ದಟ್ಟಣೆ ಇಳಿಮುಖ ವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೇಳಿದೆ.
Good news for North Bengaluru residents!
The construction of the second loop on the Hebbal Flyover, undertaken by the Bangalore Development Authority (BDA), has been completed. The loop has now been opened for traffic on a trail basis
Benefits of the new loop:
1. Easier entry… pic.twitter.com/By904NOkeV
— Bangalore Development Authority (@BDAOfficialGok) December 28, 2025
















































