ಬೆಳಗಾವಿ: ಲೋಕಸಭಾ ಉಪಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತಬೇಟೆಯ ಸಂದರ್ಭದಲ್ಲಿ ಅಸ್ವಸ್ಥರಾಗಿ ಪ್ರಚಾರವನ್ನು ಅರ್ದದಲ್ಲೇ ಮೊಟಕುಗೊಳಿಸಿದ್ದಾರೆ.
ಬುಧವಾರ ಅವರಿಗೆ ಜ್ವರ ಕಾಣಿಸಿಕೊಂಡಿದ್ದು ವೈದ್ಯರಿಂದ ತಪಾಸಣೆಗೊಳಗಾಗಿದ್ದರು. ಇಂದು ಮತ್ತೆ ಅವರಿಗೆ ಮತ್ತೆ ಜ್ವರ ಕಾಣಿಸಿಕೊಂಡಿದೆ. ಬೆಳಿಗ್ಗೆ ವಿವಿಧ ಮಠಾಧೀಶರನ್ನು ಭೇಟಿಯಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಬಳಿಕ ಬಿಜೆಪಿ ಅಭ್ಯರ್ಥಿ ಮಂಗಳ ಅಂಗಡಿ ಪರ ರೋಡ್ ಶೋದಲ್ಲಿ ಭಾಗಿಯಾದರು. ಆದರೆ ಜ್ವರದಿಂದಾಗಿ ಅವರು ಪ್ರಚಾರ ಕಣದಿಂದ ನಿರ್ಗಮಿಸಿ, ವಿಶ್ರಾಂತಿಗಾಗಿ ಹೋಟೆಲ್‌ಗೆ ಮರಳಿದರು.