ಬೆಳಗಾವಿ: ಒಂದೆಢ ಬಿಎಸ್‌ವೈ ಸಾಮ್ರಾಜ್ಯಕ್ಕೆ ಹೊಸ ಮಂತ್ರಿಗಳ ಸೇರ್ಪಡೆಯೊಂದಿಗೆ ಭೀಮ ಬಲ ಬಂದಿದ್ದರೆ ಮತ್ತೊಂದೆಡೆ ಬಿಜೆಪಿ ಚಾಣಕ್ಯನ ಆಗಮನಕ್ಕೆ ನಡೆದಿರುವ ತಯಾರಿ ಕೇಸರಿ ಪಾಳಯದಲ್ಲಿನ ಸೇನಾನಿಗಳ ಸಡಗರವನ್ನೂ ಹೆಚ್ಚಿಸಿದೆ.
ಜನವರಿ 17ರಂದು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜನಸೇವಕ ಸಮಾವೇಶ ಜರುಗಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಾರಥ್ಯದಲ್ಲಿ ಸಮರ ಸಜ್ಜಿನಲ್ಲಿ ಸಿದ್ದತೆ ಸಾಗಿದೆ.
ಬೆಳಗಾವಿಯ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಸಚಿವರನ್ನೊಳಗೊಂಡ ಬಿಜೆಪಿ ನಾಯಕರ ತಂಡ ಪೂರ್ವ ತಯಾರಿಯನ್ನು ಪರಿಶೀಲಿಸಿತು. ಜಿಲ್ಲೆಯ ಬಿಜೆಪಿ ನಾಯಕರು ಮತ್ತು ಹಿರಿಯ ಪೋಲಿಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.