ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಅಗ್ರಬೈಲು ವೆಂಕಟ್ರಮಣ ಹೊಳ್ಳ ವಿಧಿವಶರಾಗಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಅವರ ಪಾರ್ಥಿವ ಶರೀರಕ್ಕೆ ನಾಡಿನ ಗಣ್ಯಾತಿಗಣ್ಯರು ಅಂತಿಮ ನಮನ ಸಲ್ಲಿಸಿದರು.
ತಮ್ಮ ಬದುಕನ್ನು ಸಂಘದ ಕಾರ್ಯಕ್ಕಾಗಿ ಮುಡುಪಾಗಿಟ್ಟಿದ್ದ ವೆಂಕಟರಮಣ ಹೊಳ್ಳರು ಸಂಘದ ಪ್ರಚಾರಕರಾಗಿ, ಕಾರ್ಯವಾಹರಾಗಿ ಹಲವಾರು ರಾಷ್ಟ್ರಭಕ್ತ ಯುವಕರಿಗೆ ಶಿಕ್ಷಣ ನೀಡಿದ್ದಾರೆ. ಹೊಳ್ಳರ ಸಂಘಟನಾ ಕೌಶಲ್ಯದ ಆಕರ್ಷಣೆಯಿಂದಾಗಿ ತರುಣರನೇಕರು ಪ್ರಚಾರಕಾರಾಗಿ, ವಿಸ್ತಾರಕರಾಗಿ ಸಂಘದ ಸೇವೆಯಲ್ಲಿ ತೊಡಗಿದ್ದಾರೆ.
ಬಂಟ್ವಾಳ ಸಮೀಪ ಬಿ.ಮೂಡ ಗ್ರಾಮದ ಅಗ್ರಬೈಲು ವೆಂಕಟ್ರಮಣ ಹೊಳ್ಳರ ಪಾರ್ಥೀವ ಶರೀರದ ಅಂತಿಮಯಾತ್ರೆಯಲ್ಲಿ ಆರೆಸ್ಸೆಸ್‌ನ ರಾಷ್ಟ್ರೀಯ ಪ್ರಮುಖರಾದ ಡಾ.ಕಲ್ಲಡ್ಕ ಪ್ರಭಾಕರ್ ಭಟ್, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸೇರಿದಂತೆ ಸಂಘಪರಿವಾರದ ಪ್ರಮುಖರನೇಕರು ಭಾಗವಹಿಸಿ ಗೌರವ ಸಮರ್ಪಿಸಿದರು.