ಮಂಗಳೂರು: ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ವತಿಯಿಂದ ಶ್ರೀ ಕ್ಷೇತ್ರ ಕಾರಿಂಜದ ಪಾವಿತ್ರ್ಯತೆಯ ಸಂರಕ್ಷಣೆಗಾಗಿ ಹಮ್ಮಿಕೊಂಡ ‘ರುದ್ರಗಿರಿಯ ರಣಕಹಳೆ’ ಎಂಬ ಜಾಗೃತ ಸಮಾವೇಶ ಹಿಂದೂ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಯಿತು.
ವಗ್ಗ ಜಂಕ್ಷನ್ ಬಳಿ ಶೋಭಾಯಾತ್ರೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಚಾಲನೆ ನೀಡಿದರು.
ಹಿಂದೂ ಸಂಘಟನೆಗಳ ಪ್ರಮುಖರು, ಬಿಜೆಪಿ ನಾಯಕರನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.