ಬೆಂಗಳೂರು: ಗತಿಸಿದ ವರ್ಷ ಇನ್ನು ಮುಂದೆ ನೆನಪು.. ಹೊಸ ವರ್ಷದಲ್ಲಿ ನಿತ್ಯವೂ ಹುರುಪು.. ಈ ಸೂತ್ರದೊಂದಿಗೆ ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಸಾರಥ್ಯದ ತಂಡ ಆಯೋಜಿಸಿದ್ದ ‘ಹೊಸ ವರ್ಷಾಚರಣೆ’ಯ ಸೊಬಗು, ಸೊಗಸು ಅನನ್ಯ ಎಂಬಂತಿತ್ತು.
2022ನ್ನು ಬೀಳ್ಕೊಟ್ಟು ನೂತನ ವರ್ಷವನ್ನು ನಾಡು ಸ್ವಾಗತಿಸಿದ ವೈಖರಿ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಹಿಂದಿನ ಎರಡು ವರ್ಷ ಕಾಲ ಕೊರೋನಾ ಆಘಾತದಿಂದಾಗಿ ವಿಶೇಷ ಆಚರಣೆಯ ಅವಕಾಶ ದೂರವಾಗಿತ್ತು. ಆದರೆ ಈ ಬಾರಿ ಮತ್ತೆ ಅದ್ಧೂರಿ ಕ್ಷಣಗಳೊಂದಿಗೆ ನೂತನ ವರ್ಷವನ್ನು ವೈಭವದಿಂದ ಸ್ವಾಗತಿಸಲಾಯಿತು.
'New Year' Celebration..
Bangalore Press Club pic.twitter.com/9tmWIxPcgh— jayaa (@unsocial2023) January 1, 2023
ಸದಾ ಒತ್ತಡದ ಕೆಲಸಗಳಲ್ಲಿ ತಲ್ಲೀನವಾಗುತ್ತಿರುವ ಮಾಧ್ಯಮ ಬಳಗದ ಸ್ನೇಹಿತರು ಪರಿವಾರ ಸಮೇತವಾಗಿ ಸಮಾಗಮವಾಗುವ ಉದ್ದೇಶದಿಂದ ಈ ಬಾರಿ ಅಧ್ಯಕ್ಷ ಆರ್.ಶ್ರೀಧರ್ ಸಾರಥ್ಯದ ಬೆಂಗಳೂರು ಪ್ರೆಸ್ ಕ್ಲಬ್ ವಿಶೇಷ ಮನೋರಂಜನಾ ಸನ್ನಿವೇಶವನ್ನು ರೂಪಿಸಿತ್ತು. ಫೈವ್‌ಸ್ಟಾರ್ ಪ್ರಾಂಗಣಗಳನ್ನೂ ಮೀರಿದ ‘ಸೊಬಗು ಸೊಗಸು’ ಈ ಪ್ರೆಸ್ ಕ್ಲಬ್ ಆವರಣದಲ್ಲಿ ಕಂಡು ಬಂತು.
ಕಾರ್ಯಕ್ರಮಕ್ಕೆ ಆಗಮಿಸಿದ ಮಂದಿಗೆ ಭಕ್ಷ್ಯ ಭೋಜನದ ಆತಿಥ್ಯವಷ್ಟೇ ಅಲ್ಲ, ಮನರಂಜನೆಯ ರಸದೂಟ ಕೂಡಾ ಖುಷಿ ತಂದುಕೊಟ್ಟಿತು. ರಸಸಂಜೆಯ ಹಾಡಿನ ಮೋಡಿಯು ‘ವರ್ಷಾಚರಣೆ’ಯ ಪರ್ವದಲ್ಲಿ ಯುವಜನರಿಗೆ ಉತ್ಸಾಹ ತುಂಬಿದರೆ, ಚಿಣ್ಣರ ಸಂಭ್ರಮ ಇಡೀ ಉತ್ಸವದ ಆಕರ್ಷಣೆಯನ್ನು ನೂರ್ಮಡಿಗೊಳಿಸಿತು. ಮಧ್ಯರಾತ್ರಿ ‘ನೂತನ ವರ್ಷ’ಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಂತೂ ಮಕ್ಕಳ ಸಮೂಹ ಹಾಡು ನೃತ್ಯಗಳೊಂದಿಗೆ ಸಂಭ್ರಮಿಸಿದ ಸನ್ನಿವೇಶ ಗಮನಸೆಳೆಯಿತು.
ಸಿಲಿಕಾನ್ ಸಿಟಿಗೆ ದೀಪಾಲಂಕಾರ..
ಸಿಲಿಕಾನ್ ಸಿಟಿಯ ಎಂ.ಜಿ.ರೋಡ್, ಬ್ರಿಗೇಡ್ ರೋಡ್‌ನಲ್ಲೂ ಹೊಸ ವರ್ಷಾಚರಣೆ ಗಮನಸೆಳೆಯಿತು. ಹೊಸವರ್ಷದ ಆಗಮನ ಸಂದರ್ಭದಲ್ಲಿ ಯುವಜನ ಸಮೂಹದ ಸಂಭ್ರಮ ಮುಗಿಲೆತ್ತರ ರಾಚಿತು. ಹೆಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಯಶವಂತಪುರ, ವೈಟ್‌ಫೀಲ್ಡ್ ಸಹಿತ ಪ್ರಮುಖ ಹೊಟೇಲ್, ಕ್ಲಬ್, ಪಬ್, ರೆಸಾರ್ಟ್‌ಗಳಲ್ಲೂ ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳು ಏರ್ಪಾಡಾಗಿದ್ದವು.