ಅಯೋಧ್ಯೆ: ರಾಮನ ಜನ್ಮಭೂಮಿಯಲ್ಲೇ ಶ್ರೀರಾಮ ಮಂದಿರ ನಿರ್ಮಾಣವಾಗಿದ್ದು ಭವ್ಯ ದೇವಾಲಯ ಉದ್ಘಾಟನೆಗೆ ಸಜ್ಜಾಗಿರುವಂತೆಯೇ ಸ್ಫೋಟ ಬೆದರಿಕೆ ಬಂದಿದೆ. ಅಯೋಧ್ಯೆಯ ರಾಮ ಮಂದಿರವನ್ನು ಸ್ಫೋಟಿಸುವುದಾಗಿ ಕಿಡಿಗೇಡಿಗಳು ಬೆದರಿಕೆಯೊಡ್ಡಿದ್ದಾರೆ.
ಭಾರತೀಯ ಕಿಸಾನ್ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ಈಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ಅಯೋಧ್ಯೆ ರಾಮ ಮಂದಿರವನ್ನು ಸ್ಫೋಟಿಸುವುದಾಗಿ ಬಂದಿರುವ ಈ ಬೆದರಿಕೆ ಈಮೇಲ್ ಜಾಡುಹಿಡಿದು ಹೋರಾಟ ಪೊಲೀಸರು ಇಬ್ಬರನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಎಸ್‌ಟಿಎಫ್ ತಂಡ ಆರೋಪಿಗಳಿಬ್ಬರನ್ನು ಬಂಧಿಸಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಹಿತಿ ನೀಡಿದ್ದಾರೆ.
ಗೊಂಡಾದ ಕತ್ರಾ ನಿವಾಸಿಗಳಾದ ತಾಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಎಂಬವರನ್ನು ಬಂಧಿಸಿರುವ ಎಸ್‌ಟಿಎಫ್ ಆರೋಪಿಗಳಿಂದ ಎರಡು ಮೊಬೈಲ್, ಎರಡು ವೈ-ಫೈ ರೂಟರ್ ಮತ್ತು ಸಿಸಿಟಿವಿ ಡಿವಿಆರ್ ವಶಪಡಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.