ಬೆಂಗಳೂರು: ಸಿಲಿಕಾನ್ ಸಿಟಿ ಸಹಿತ ಪ್ರನುಖ ನಗರಗಳಲ್ಲಿ ಆಟೋ ರಿಕ್ಷಾ ದರ ಏರಿಕೆಗೆ ಚಿಂತನೆ ನಡೆದಿದೆ. ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ದರ 25ರಿಂದ 30 ರೂಪಾಯಿಗೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.
ಈ ಹಿಂದೆ ಸುಮಾರು 8 ವರ್ಷಗಳ ಹಿಂದೆ ಆಟೋ ಪ್ರಯಾಣ ಬಾಡಿಗೆ ದರ ಪರಿಷ್ಕರಿಸಲಾಗಿದೆ. ಅನಂತರ ಇಂಧನ ದರ ಹೆಚ್ಚಿದ್ದರೂ ಆಟೋ ಬಾಡಿಗೆ ದರ ಬದಲಾಗಿಲ್ಲ. ಇದರಿಂದ ಆಟೋ ಚಾಲಕ ಮಾಲೀಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದರ ಪರಿಷ್ಕರಣೆ ಸಂಬಂಧ ಆಟೋ ಚಾಲಕರು ಹಾಗೂ ಮಾಲೀಕರು ತಮ್ಮ ಸಂಘದ ಮೂಲಕ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಆದರೆ ಈ ಬಾರಿ ಸರ್ಕಾರ ಕನಿಷ್ಠ ದರ 5 ರುಪಾಯಿ ಹೆಚ್ಚಳದ ಜೊತೆ, ಪ್ರಯಾಣ ದರ ಪರಿಷ್ಕರಿಸುವ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅವರು ಭರವಸೆ ನೀಡಿದ್ದಾರೆಂದು ಆಟೋ ಚಾಲಕರ ಸಂಘದ ಸಂಘದ ಪ್ರಮುಖರು ತಿಳಿಸಿದ್ದಾರೆ.