ಮಾಜಿ ಐಪಿಎಸ್ ಅಧಿಕಾರಿ, ಹಾಲಿ ಬಿಜೆಪಿ ಮುಖಂಡ ಅಣ್ಣಾಮಲೈ ಮೊದಲ ಬಾರಿಗೆ ನಟಿಸಿರುವ ಕನ್ನಡ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.
ಅಣ್ಣಾಮಲೈ ಅವರ ಮೊದಲ ಕನ್ನಡ ಸಿನಿಮಾ ‘ಅರಬ್ಬಿ’ ತೀವ್ರ ಕುತೂಹಲದ ಚಿತ್ರ. ಐಪಿಎಸ್ ಅಧಿಕಾರಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡ ಬಳಿಕ ಅಣ್ಣಾಮಲೈ ಈ ಸಿನಿಮಾದಲ್ಲಿ ನಟಿಸಿದ್ದು ಕೆಲವು ಆಕ್ಷನ್ ದೃಶ್ಯಗಳು ಗಮನಸೆಳೆದಿವೆ. ಈ ಸಿನಿಮಾ ಶೀಘ್ರವೇ ತೆರೆಗೆ ಬರಲಿದೆ.