ತೆನಾಲಿ: ಜಿದ್ದಾಜಿದ್ದಿನ ಅಖಾಡವಾಗಿರುವ ಆಂಧ್ರಪ್ರದೇಶ ವಿಧಾನಸಭಾ ಚುನಾವನಾ ಕಣ ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಜೊತೆಗೆ ಅನೇಕಾನೇಕ ಅವಾಂತರಗಳೂ ಅಖಾಡದಲ್ಲಿ ಕಾಣಿಸಿಕೊಂಡವು. ಅದರಲ್ಲೂ ಗುಂಟೂರು ಜಿಲ್ಲೆಯ ತೆನ್ನಾಲಿಯಲ್ಲಿ ಸ್ಥಳೀಯ ಶಾಸಕರೊಬ್ಬರು ಯಾರಿಗೋ ಕಪಾಳಮೋಕ್ಷ ಮಾಡಲು ಹೋಗಿ ತಾನೇ ಕೆನ್ನೆಗೆ ಹೊಡೆಸಿಕೊಂಡ ಘಟನೆ ಗಮನಸೆಳೆದಿದೆ.
YSRCP MLA Annabatuni Sivakumar slapped a voter who confronted him for not following the queue to cast his vote. In return voter also slapped him. Thereafter sidekicks of MLA assaulted poor voter. pic.twitter.com/hJUzL4u5H5
— News Arena India (@NewsArenaIndia) May 13, 2024
ತೆನಾಲಿ ವಿಧಾನಸಭಾ ಕ್ಷೇತ್ರದ ವೈಎಸ್‌ಆರ್‌ಸಿಪಿ ಶಾಸಕ ಎ. ಶಿವಕುಮಾರ್ ಅವರು ಮತಗಟ್ಟೆ ಬಳಿ ಸರದಿ ಸಾಲನ್ನು ದಾಟಿಕೊಂಡು ತೆರಳುತ್ತಿದ್ದರು. ಈ ವೇಳೆ ಸರದಿಯಲ್ಲಿದ್ದ ವ್ಯಕ್ತಿಯೊಬ್ಬರು ಶಿವಕುಮಾರರನ್ನು ಪ್ರಶ್ನಿಸಿದ್ದಾರೆ. ಇದರಿಂದ ಕುಪಿತರಾದ ಶಿವಕುಮಾರ್ ತನ್ನನ್ನು ಪ್ರಶ್ನಿಸಿದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಆ ವ್ಯಕ್ತಿಯೂ ಶಿವಕುಮಾರ್ ಅವರ ಕಪಾಳಕ್ಕೆ ಹೊಡೆದಿದ್ದಾರೆ. ಇದರಿಂದ ಗಲಿಬಿಲಿಗೊಂಡ ಶಿವಕುಮಾರ್ ಬೆಂಬಲಿಗರು ವ್ಯಕ್ತಿಯ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.
ಈ ಘಟನೆಯ ವೀಡಿಯೊ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ಈ ನಡುವೆ, ಹಲ್ಲೆಗೊಳಗಾದ ವ್ಯಕ್ತಿ ತೇನಾಲಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.