ನಂದ್ಯಾಲ್: ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ನವವಿವಾಹಿತರು ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ಅಲ್ಲಗಡ್ಡ ಮಂಡಲದ ನಲ್ಲಗಟ್ಲ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್‌ಗೆ ಇವರು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಪೊಲೀಸ್ ವರದಿಗಳ ಪ್ರಕಾರ, ಮುಂಜಾನೆ 5:15 ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ರಸ್ತೆಬದಿಯಲ್ಲಿ ನಿಂತಿದ್ದ ಟ್ರಕ್ ಅನ್ನು ಚಾಲಕ ಗಮನಿಸದ ಕಾರಣ ಮಾರಣಾಂತಿಕ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದ ಐವರು ಹೈದರಾಬಾದ್‌ನ ಕುಟುಂಬದ ಸದಸ್ಯರು ಸ್ಥಳದಲ್ಲೇ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ತಿರುಮಲ ದೇವಸ್ಥಾನದಲ್ಲಿ ಆಶೀರ್ವಾದ ಪಡೆದು ತಿರುಪತಿಯಿಂದ ಮನೆಗೆ ಮರಳುತ್ತಿದ್ದರು.
ಮೂಲತಃ ಸಿಕಂದರಾಬಾದ್‌ನ ಪಶ್ಚಿಮ ವೆಂಕಟಾಪುರದ ಬಾಲಕರಣ್ ಮತ್ತು ಕಾವ್ಯಾ ಅವರ ವಿವಾಹ ಫೆಬ್ರವರಿ 29 ರಂದುನಡೆದಿದ್ದು, ಮಾರ್ಚ್ 3 ರಂದು ಶಮೀರ್‌ಪೇಟ್‌ನಲ್ಲಿ ಆರತಕ್ಷತೆ ನಡೆದಿತ್ತು. ಈ ನವದಂಪತಿ ಈ ಅಪಘಾತದಲ್ಲಿ ಸಾವನ್ನಪ್ಪಿದ್ದು ಮೃತರ ಬಂಧುಗಳ ರೋಧನ ಮುಗಿಲುಮುಟ್ಟಿತ್ತು.