ಬೆಂಗಳೂರು: ಪ್ರತಿಷ್ಠಿತ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಯಲಹಂಕ ಬಳಿಯ ಜಕ್ಕೂರಿನಲ್ಲಿರುವ ವಾಯುನೆಲೆಯಲ್ಲಿ ಈ ಬಾರಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಬೆಳಿಗ್ಗೆ ಚಾಲನೆ ನೀಡಿದರು.
ಏಷ್ಯಾದ ಅತೀ ದೊಡ್ಡ ವೈಮಾನಿಕ ಪ್ರದರ್ಶನ ಎಂದೇ ಗುರುತಾಗಿರುವ ಈ ‘ಏರೋ ಇಂಡಿಯಾ ಶೋ’ 14ನೇ ಆವೃತ್ತಿಯಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.
Our Airforce gonna paint patriotism color to Namma Bengaluru’s sky for next 5 days!
What a moment.❤️#AeroIndia pic.twitter.com/uca6j5ol3u
— Shruthi Thumbri 🇮🇳 (@Shruthi_Thumbri) February 13, 2023
ಏರ್ ಸ್ಟಾಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಸಹಿತ ರಕ್ಷಣಾ ಕ್ಷೇತ್ರದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆದಿದೆ.