ಮಂಗಳೂರು: ಹಿಂದೂ, ಹಿಂದೂತ್ವ ಮೂಲಕ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಹಿಂದೂಗಳ ಬಗ್ಗೆ ನಿರ್ಲಕ್ಷ್ಯ ತಾಳಿದೆ ಎಂಬುದು ಹಿಂದೂ ಸಂಘಟನೆಗಳ ನಾಯಕರ, ಕಾರ್ಯಕರ್ತರ ಆಕ್ರೋಶ. ‘ಹಿಂದೂ ಸಾಮ್ರಾಜ್ಯ ಕಟ್ಟಲು ನಾವು ಬೇಕು, ಆದರೆ ನಮ್ಮಿಂದಾಗಿ ಗದ್ದುಗೆ ಏರಿದವರು ಸಮಾಜಮುಖಿಯಾಗಿ ಇರುವುದಿಲ್ಲ’ ಎಂಬ ಆಕ್ರೋಶದ ಧ್ವನಿ ಮಾರ್ಧನಿಸುತ್ತಿದೆ.
ಈ ವಿಚಾರದಲ್ಲಿ ಬಿಜೆಪಿ ವಿರುದ್ದ ಭಜರಂಗದಳದ ಮಾಜಿ ನಾಯಕ ಪ್ರಮೋದ್ ಮುತಾಲಿಕ್ ಧ್ವನಿ ಎತ್ತಿದ್ದೇ ತಡ, ಬಿಜೆಪಿ ದಂಡನಾಯಕ ನಳಿನ್ ಕುಮಾರ್ ಕಟೀಲ್ ಸಹಿತ ಕಮಲ ನಾಯಕರು ಮತ್ತೆ ಹಿಂದೂತ್ವದ ಮಂತ್ರ ಪಠಿಸಲಾರಂಭಿಸಿದ್ದಾರೆ ಎಂಬುದು ಬಿಜೆಪಿ ಕಾರ್ಯಕರ್ತರ ಹೇಳಿಕೆಗಳು.
‘So I am asking you people don't speak about SMALL issues like road and sewage.. If your worried of your children’s future and if you want to stop Love jihad,then we need BJP for that. To get rid of Love Jihad, we need BJP’:BJP Karnataka president: Naleen Kateel. Priorities set? pic.twitter.com/QnM39usrlW
— Rajdeep Sardesai (@sardesairajdeep) January 3, 2023
ಈ ನಡುವೆ, ಅಭಿವೃದ್ಧಿ ವಿಚಾರ ಬಿಟ್ಟು ಬಿಟ್ಟು ಲವ್ ಜಿಹಾದಿ ಬಗ್ಗೆ ಗಮನಕೊಡಿ ಎಂದು ನಳಿನ್ ಕುಮಾರ್ ಕಟೀಲ್ ಕರೆ ನೀಡಿರುವ ವೈಖರಿ ಬಗ್ಗೆ ಬಿಜೆಪಿ ಕಾರ್ಯಕರ್ತರೇ ಅಸಮಾಧಾನ ಹೊರಹಾಕಿದ್ದಾರೆ. ‘ಕಾಂಗ್ರೆಸ್ಸು ಅಲ್ಪಸಂಖ್ಯಾತರನ್ನು ತುಷ್ಟೀಕರಿಸಿದ್ದಕ್ಕಷ್ಟೇ ಅಲ್ಲ, 60 ವರ್ಷಗಳಲ್ಲಿ ಭ್ರಷ್ಟಾಚಾರ ಮಾಡಿದೆ ಎಂಬ ಕಾರಣಕ್ಕಾಗಿ ಆ ಪಕ್ಷವನ್ನು ದೂರ ಇಟ್ಟು ಬಿಜೆಪಿಯನ್ನು ಗೆಲ್ಲಿಸಿದ್ದೇವೆ. ಇದೀಗ ಬಿಜೆಪಿ ಕೂಡಾ ಕಾಂಗ್ರೆಸ್‌ಗಿಂತ ಭಿನ್ನವಾಗಿಲ್ಲ’ ಎಂದು ಕೇಸರಿ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ‘ರಸ್ತೆ..ಚರಂಡಿ.. ವಸತಿ.. ಉದ್ಯೋಗ ಏನೂ ಕೇಳದೆ, ಲವ್ ಜಿಹಾದ್ ಬಗ್ಗೆ ಮಾತನಾಡಬೇಕು’ ಎಂದು ನಳಿನ್ ಕರೆ ಕೊಟ್ಟಿರುವುದನ್ನು ‘ಹಾಸ್ಯಾಸ್ಪದ ಹೇಳಿಕೆ’ ಎಂದು ಸಾರ್ವಜನಿಕರು ಲೇವಡಿ ಮಾಡಿದ್ದಾರೆ. ಈ ಬೆಳವಣಿಗೆಯಿಂದ ಗಲಿಬಿಲಿಗೊಂಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನಳಿನ್ ಕುಮಾರ್ ಜೊತೆ ಮಾತನಾಡುವುದಾಗಿ ಹೇಳಿಕೆ ನೀಡಿದ್ದಾರೆ.
ಕರಾವಳಿಯಲ್ಲೂ ಅಸಮಾಧಾನ?
ಕಾಂಗ್ರೆಸ್ ಪಕ್ಷವು ಮುಸ್ಲಿಂ ಮುಖಂಡರ ಪರವಾಗಿದೆ ಎಂಬ ವಿಚಾರವನ್ನು ಮುಂದಿಟ್ಟು ಹಾಗೂ ಆ ಪಕ್ಷದ ಬಹುತೇಕ ನಾಯಕರು ಮುಸ್ಲಿಮರ ನಂಟು ಹೊಂದಿದ್ದಾರೆ ಎಂಬುದನ್ನು ಬೊಟ್ಟು ಮಾಡಿ, ಆ ಪಕ್ಷದ ವಿರುದ್ದ ಆರೆಸ್ಸೆಸ್ ಸಹಿತ ಹಿಂದೂ ಸಂಘಟನೆಗಳು ಪ್ರಚಾರ ಕೈಗೊಂಡಿದ್ದವು. ಆದರೆ ಇದೀಗ ಬಿಜೆಪಿ ಸರ್ಕಾರದಲ್ಲಿ ಕೆಲಸ ಆಗಬೇಕಾದರೆ ಮುಸ್ಲಿಮ್ ಏಜೆಂಟರನ್ನು ಹೊರತುಪಡಿಸಿ ಬೇರೆ ನಾಯಕರಿಂದ ಏನೂ ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕರಾವಳಿಯ ಕೇಸರಿ ಕಾರ್ಯಕರ್ತರದ್ದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಕೆಲಸಗಳು ಆಗಬೇಕಾದರೆ ಮುಸ್ಲಿಂ ಏಜೆಂಟರೇ ಆಧಾರ. ಇದು ಕರಾವಳಿ ಜಿಲ್ಲೆಗಷ್ಟೇ ಅಲ್ಲದೆ, ಆರೋಗ್ಯ ಇಲಾಖೆ, ಉನ್ನತ ಶಿಕ್ಷಣ ಇಲಾಖೆಯ ಕೆಲಸಗಳು ಆಗಬೇಕಾದರೂ ಕೆಲವು ಮುಸ್ಲಿಂ ಪ್ರಭಾವಿಗಳನ್ನಯ ಅವಲಂಭಿಸಬೇಕಿರುವುದು ಅನಿವಾರ್ಯವಾಗಿದೆ ಎಂಬುದು ಬಿಜೆಪಿ ಕಾರ್ಯಕರ್ತರದ್ದೇ ಅಳಲು.
ಕರ್ನಾಟಕದಲ್ಲಿ ‘ಆಡಳಿತ ಜಿಹಾದ್..’?
ಸದ್ಯ ದೇಶದಲ್ಲಿ ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’, ‘ಹಲಾಲ್ ಜಿಹಾದ್’ ಇತ್ಯಾದಿ ಜಿಹಾದ್ ನಡೆಯುತ್ತಿರುವಾಗ, ಈಗ ‘ಆಡಳಿತ ಜಿಹಾದ್’ ಎಂಬುದು ಹೊಸತಾಗಿ ಆರಂಭವಾಗಿದೆಯೆ ಅಥವಾ ಆ ದೃಷ್ಟಿಯಲ್ಲಿ ಯಾರಾದರೂ ಪ್ರಯತ್ನಿಸುತ್ತಿದ್ದಾರೆಯೇ, ಎಂದು ಯಾರಾದರೂ ಹೇಳಿದರೆ, ಆಶ್ಚರ್ಯವೆನಿಸಲಿಕ್ಕಿಲ್ಲ#ಸಂಪಾದಕೀಯ https://t.co/WkOGRASrXU#Editorial pic.twitter.com/9TUvqYXjCy
— Sanatan Prabhat (Kannada) (@Sanatan_Prabhat) December 25, 2022
ಇದೇ ವೇಳೆ, ಶಾಸಕರಾದ ಭರತ್ ಶೆಟ್ಟಿ, ಕಾಮತ್ ಮೊದಲಾದವರು ಹಿಂದೂ ಸಂಘಟನೆಗಳಿಗೆ ಕೊಟ್ಟಿರುವ ಕೊಡುಗೆಗಳೆಷ್ಟು ಎಂಬುದನ್ನು ಸಂಘದ ಹಿರಿಯರು ಪರಿಗಣಿಸಬೇಕಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ಲವ್ ಜಿಹಾದಿ ಬಗ್ಗೆ ಮಾತನಾಡುವ ನಳಿನ್ ಕುಮಾರ್ ಅವರೇ ಮುಸ್ಲಿಂ ಪ್ರಭಾವಿಗಳ ಕೈಗೊಂಬೆ ಆಗಿರುವುದೇಕೆ ಎಂಬ ಮಾತುಗಳೂ ಪ್ರತಿಧ್ವನಿಸಿದೆ. ಬಿಜೆಪಿ ನಾಯಕರು, ಐಎಎಸ್-ಐಪಿಎಸ್ ಅಧಿಕಾರಿಗಳಷ್ಟೇ ಅಲ್ಲ, ಯೂನಿವರ್ಸಿಟಿಗಳೂ, ಸರ್ಕಾರದ ಪ್ರಮುಖ ಇಲಾಖೆಗಳೂ ಈ ಮಾಫಿಯಾದ ಹಿಡಿತದಲ್ಲಿವೆಯಂತೆ. ಈ ವಿಚಾರಗಳ ಬಗ್ಗೆ ಆರೆಸ್ಸೆಸ್‌ನ ಹಿರಿಯರು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸಂಘದ ಸಕ್ರಿಯ ಕಾರ್ಯಕರ್ತರ ಹಾಗೂ ಹಿರಿತಲೆಗಳು ಪ್ರತಿಪಾದಿಸಿವೆ.
Assembly election: ರಸ್ತೆ, ಚರಂಡಿ ಸಮಸ್ಯೆ ಬಿಡಿ, ಲವ್ ಜಿಹಾದ್ ಬಗ್ಗೆ ಚರ್ಚಿಸಿ: ಸಂಸದ ಕಟೀಲ್ ಸಲಹೆಗೆ ಭಾರಿ ವಿರೋಧ#Assembly #KarnatakaElections2023 #politics #BJP #NalinKumarKateel #LoveJihad @nalinkateel https://t.co/HXmbbKr7WV
— Asianet Suvarna News (@AsianetNewsSN) January 3, 2023






























































