ಮೆಘಾ ಸ್ಟಾರ್ ಚಿರಂಜೀವಿ ಅಳಿಯ ಸಾಯಿ ಧರ್ಮ ತೇಜ್ ಅವರು ಅಪಘಾತಕ್ಕೀಡಾಗಿದ್ದಾರೆ. ಹೈದರಾಬಾದ್‌ನಲ್ಲಿ ಸಾಯಿ ಧರ್ಮ ತೇಜ್ ಅವರ ಬೈಕ್ ಅಪಘಾತಕ್ಕೀಡಾಗಿದೆ.
ಕೇಬಲ್ ಬ್ರಿಜ್ ಬಳಿ ಅಪಘಾತ ಸಂಭವಿಸಿದೆ. ಸಾಯಿ ಧರ್ಮ ತೇಜ್ ಅವರು ಸವಾರಿ ಮಾಡುತ್ತಿದ್ದ ಬೈಕ್ ಸರ್ವಿಸ್ ರಸ್ತೆಗೆ ಎಂಟ್ರಿ ವೇಳೆ ಸ್ಕಿಡ್ ಆಗಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
#SaiDharamTej Accident CCTV Visuals pic.twitter.com/5R01xwlzB7
— M9 NEWS (@M9News_) September 10, 2021
ಸಾಯಿ ಧರ್ಮ ತೇಜ್ ಅವರಿಗೆ ಗಾಯಗಳಾಗಿದ್ದು, ಕಾಲರ್ ಬೋನ್ ಮುರಿತಕ್ಕೊಳಗಾಗಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಚಿರಂಜೀವಿ, ಅಭಿಮಾನಿಗಳಲ್ಲಿ ಧೈರ್ಯ ತುಂಬಿದ್ದಾರೆ.
ಈ ನಡುವೆ ಸಾಯಿ ಧರ್ಮ ತೇಜ್ ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.