ಚೆನ್ನೈ: ತಮಿಳು ನಟ ಡೇನಿಯಲ್ ಬಾಲಾಜಿ ವಿಧಿವಶರಾಗಿದ್ದಾರೆ. 48 ವರ್ಷ ವಯಸ್ಸಿನ ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಕೊಟ್ಟಿವಾಕಂನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ತಮಿಳು ಮಾತ್ರವಲ್ಲ, ಕನ್ನಡ ಸಿನಿಮಾಗಳಲ್ಲೂ ಡೇನಿಯಲ್ ಬಾಲಾಜಿ ನಟಿಸಿದ್ದಾರೆ. ನಟನ ನೊಧನಕ್ಕೆ ಚಿತ್ರೋದ್ಯಮ ಗಣ್ಯರು ಸಂತಾಪ ಸೂಚಿಸಿದ್ದಾರೆ.