ಶಿವಮೊಗ್ಗ: ಭಾರೀ ಮಳೆಯ ನಡುವೆ ಮಲೆನಾಡಿನಲ್ಲಿ ಸರಣಿ ಅವಘಡಗಳು ಸಂಭವಿಸುತ್ತಿವೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರಲಘಟ್ಟ ಬಳಿ ದ್ವಿಚಕ್ರ ವಾಹನ ಮತ್ತು ಆ್ಯಂಬುಲೆನ್ಸ್ ನಡುವೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಧಾರುಣ ಘಟನೆ ತಡರಾತ್ರಿ ಸಂಭವಿಸಿದೆ.
ಶಿಕಾರಿಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಮೃತರನ್ನು ಹೊಸ ಜೋಗದವರೆನ್ನಲಾದ 27 ವರ್ಷದ ಕಾರ್ತಿಕ್, 25 ವರ್ಷದವರಾದ ಪ್ರಸನ್ನ, ಅಜಯ್ ಎಂದು ಗುರುತಿಸಲಾಗಿದೆ.