ದೆಹಲಿ: ರಾಜಸ್ಥಾನ ರಾಜಕೀಯ ಚಿತ್ರ ವಿಚಿತ್ರ ತಿರುವು ಪಡೆಯುತ್ತಿದೆ. ರಾಜಕೀಯ ಬಿಕ್ಕಟ್ಟಿನ ಮಧ್ಯೆ ಶಾಸಕರ ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಅಧಿಕಾರ ಬಗ್ಗೆ ಭಾರೀ ಚರ್ಚೆ ಸಾಗಿದೆ.
ಬಂಡಾಯ ಕಾಗ್ರೇಸ್ ಶಾಸಕರನ್ನು ಅನರ್ಹಗೊಳಿಸಬೇಕೆಂದು ಕೋರಿ ಪಕ್ಷದ ಶಾಸಕರು ಸ್ಪೀಕರ್’ಗೆ ಮನವಿ ಸಲ್ಲಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ರಾಜಸ್ಥಾನ ರಾಜಕೀಯ ಬೆಳವಣಿಗೆಯನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದಿದೆ.
ಬಂಡಾಯ ವಿದ್ಯಮಾನದಿಂದಾಗಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಭಿನ್ನಮತೀಯ ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರ ಪ್ರಯೋಗಿಸಲು ಪ್ರಯತ್ನಿಸಿದೆ. ಕರ್ನಾಟಕದಲ್ಲಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಮಿತ್ರ ಪಕ್ಷದ ಶಕರು ಬಂಡಾಯವೆದ್ದಾಗ ಪ್ರಯೋಗಿಸಿದ ರೀತಿಯಲ್ಲೆ ರಾಜಸ್ಥಾನ ಕಾಗ್ರೇಸ್ ಮುಖಂಡರು ಪ್ರಯತ್ನ ಮುಂದುವರಿಸಿದ್ದಾರೆ.
ಸಚಿನ್ ಪೈಲಟ್ ಹಾಗೂ ಇತರ 18 ಶಾಸಕರನ್ನು ಅನರ್ಹಗೊಳಿಸಲು ಕಾಂಗ್ರೆಸ್ ಪಕ್ಷ ಸ್ಪೀಕರ್ ಅವರನ್ನು ಕೋರಿದ್ದು, ಈ ಸಂಬಂಧ ನೋಟೀಸ್ ನೀಡಿರುವ ಸ್ಪೀಕರ್ ಬಂಡಾಯ ಶಾಸಕರಿಗೆ
ನೋಟಿಸ್ ನೀಡಿ ಮೂರು ದಿನಗೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದಾರೆ.
ಈ ನಡುವೆ ರಾಜಸ್ಥಾನ ಸ್ಪೀಕರ್ 18 ಶಾಸಕರಿಗೆ ನೋಟಿಸ್ ನೀಡಿರುವುದು ಸಂವಿಧಾನದ 10 ವಿಧಿಯ ವ್ಯಾಪ್ತಿಯನ್ನು ಮೀರಿದೆ ಎಂದು ರಾಜಕೀಯ ಮುಖಂಡರು ಆರೋಪಿಸಿದ್ದಾರೆ. ಹಾಗಾಗಿ ಮುಂದೇನಾಗುತ್ತೆ ಎಂಬುದೇ ಕುತೂಹಲ.


















































