ಇಂದು ಕೋಲಾರದಲ್ಲಿ ದೊಡ್ಡ ಹೈಡ್ರಾಮವೇ ನಡೆದು ಹೋಗಿದೆ.ಅನ್ಯಕೋಮಿನ ಯುವಕನೊಬ್ಬ ಏಕಾಏಕಿ ದೇವಾಸ್ಥಾನಕ್ಕೆ ಹೋಗಿ ದೊಡ್ಡ ರದ್ಧಾಂತ ಮಾಡಿದ್ದಾನೆ.ಈತ ಇಂದು ಕೋಲಾರದಲ್ಲಿರೋ ಕುರುಬರ ಪೇಟೆಯಲ್ಲಿರುವ ಪಂಚಮುಖಿ ಆಂಜನೇಯ ದೇವಾಲಯದ ಗರ್ಭಗುಡಿಗೆ ಪ್ರವೇಶಿಸಿ ಹಲವರ ಕೆಂಗಣ್ಣಿಗೆ ಕಾರಣವಾಗಿದ್ದಾನೆ.
ದೇವಾಲಯಕ್ಕೆ ಭೇಟಿಕೊಟ್ಟ ಈತ ನನ್ನನ್ನು ಬಲಿ ತೆಗೆದುಕೊಳ್ಳಿ ಎಂದು ದೇವಾಲಯದಲ್ಲಿ ರಂಪಾಟ ನಡೆಸಿದ್ದು ಈ ಹಿನ್ನಲೆ ಇಂದು ವಿವಿಧ ಹಿಂದು ಪರ ಸಂಘಟನೆಯ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ .




























































