ಜೇನುತುಪ್ಪ ಹೆಸರು.. ಈ ಹೆಸರು ಕೇಳಿದ್ರೆ ಚಿಕ್ಕ ವಯಸ್ಸಿನಿಂದ ಹಿಡಿದು ಹಿರಿ ಜೀವಗಳಿಗೂ ಬಾಯಲ್ಲಿ ನೀರು ಬಂದು ಬಿಡುತ್ತೆ.. ಅಷ್ಟು ರುಚಿಕರ ಹಾಗೂ ಆರೋಗ್ಯಕರ ದ್ರವ್ಯವಿದು.. ಜೇನು ತುಪ್ಪ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿಗಿದ್ದು ಸಾಕಷ್ಟು ಔಷಧ ಗುಣಗಳು ಇದಕ್ಕಿದೆ.
ಅದರಲ್ಲೂ ಹೆಣ್ಣು ಮಕ್ಕಳಿಗೆ ಜೇನು ತುಪ್ಪದಲ್ಲಿ ಹೇಳತೀರದಷ್ಟು ಉಪಯೋಗವಿದೆ. ಜೇನುವಿನಲ್ಲಿ ಹ್ಯೂಮಕ್ವೆಂಟ್ ಕಾಂಪೌಂಡ್ ಹೆಚಾಗಿದ್ದು ಚರ್ಮದ ತೇವಾಂಶವನ್ನು ಚರ್ಮವನ್ನು ಮೆದುಗೊಳಿಸುತ್ತದೆ, ಚರ್ಮ ಸುಕ್ಕು ಕಟ್ಟೋದನ್ನು ತಡೆಗಟ್ಟುತ್ತದೆ.ಸರ್ವ ತವಚೆಯ ರೋಗ ಲಕ್ಷಣಗಳನ್ನು ತಡೆಯುವಲ್ಲಿ ಜೇನು ತುಪ್ಪ ಹೆಚ್ಚಿನ ಕೆಲಸವನ್ನು ಮಾಡುತ್ತದೆ..
ಅದೇ ರೀತಿ ಆಂಟಿ ಬ್ಯಾಕ್ಟೀರಿಯಲ್ – ಆಂಟಿ ಮೈಕ್ರೋಬಿಯಲ್ ಗುಣವನ್ನು ಜೇನು ಹೊಂದಿದ್ದು ಸುಕ್ಷ್ಮಾಣು ಜೀವಿಗಳನ್ನು ಬೆಳೆಯುವುದನ್ನು ತಡೆಗಟ್ಟುತ್ತದೆ. ಜೊತೆಗೆ ಸುಟ್ಟ ಗಾಯ, ತುರಿಕೆ ಸಣ್ಣ ಪುಟ್ಟ ಗಾಯಗಳಿಗೆ ಜೇನು ತುಪ್ಪ ಲೇಪಿಸೋದರಿಮದ ಸಂಪೂರ್ಣ ಗುಣಮುಖರಾಗಬಹುದು.
ರಕ್ತ ಹೀನತೆ ಸಮಸ್ಯೆ, ಕೊಲೆಸ್ಟ್ರಾಲ್ , ಶ್ವಾಸಕೋಶದ ಸೋಂಕು, ಒಬೆಸಿಟಿ , ಸ್ನಾಯು ನೋವು ನಿವಾರಣೆ , ಹಾಗೂ ಆಲಸ್ಯವನ್ನು ದೂರ ಮಾಡುವಲ್ಲಿ ಜೇನುತುಪ್ಪ ಮಹತ್ವದ ಪಾತ್ರ ವಹಿಸುತ್ತದೆ. ಒಟ್ಟಾರೆ ಜೇನು ತುಪ್ಪದಿಂದ ಹಲವು ಉಪಯೋಗಗಳಿದ್ದು ನಿಯಮಿತವಾಗಿ ಸೇವಿಸಿದಲ್ಲೆ ಆರೋಗ್ಯ ವರ್ಧಿಸುತ್ತದೆ.