ಸುಮಾರು 370ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ 5 ದಶಕಗಳ ಕಾಲ ಸಿನಿ ರಂಗವನ್ನು ಆಳಿದ ಕೆ.ಎಸ್ ಆಶ್ವತ್ ನಾರಾಯಣ್ ಯಾರಿಗೆ ಗೊತ್ತಿಲ್ಲ ಹೇಳಿ..ಸದಾ ಕನ್ನಡ ರಂಗ ನೆನಪಿಸಿಕೊಳ್ಳುವ ವ್ಯಕ್ತಿ ಇವರು.ಆದ್ರೆ ಅವರ ಮಗ ಶಂಕರ್ ಅಶ್ವತ್ ಮಾತ್ರ ನಟನಾ ಕೌಶಲ್ಯವಿದ್ರು ತಂದೆಯಂತೆ ಚಿತ್ರರಂಗದಲ್ಲಿ ತಮಗೆ ನೆಲೆಯೂರಲು ಸಾಧ್ಯವಾಗುತಿಲ್ಲ.
ಹೌದು ಶಂಕರ್ ಅಶ್ವತ್ ಇದೀಗ ಸಿನಿಮಾವಿಲ್ಲದೆ ಊಬರ್ ಕ್ಯಾಬ್ ಚಲಾಯಿಸಿ ಜೀವನ ಸಾಗಿಸುತ್ತಿದ್ದಾರೆ.ಇದರ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶಂಕರ್‍ರವರನ್ನು ಗುರುತಿಸಿ ಯಜಮಾನ ಸಿನಿಮಾದಲ್ಲಿ ನಟಿಸಲು ಅವಕಾಶವನ್ನು ನೀಡಿದ್ರು . ಬಳಿಕ ಇದೀಗ ಕೆಲ ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು , ಇದರ ನಡುವೆ ದೊಡ್ಡ ಸಂಸ್ಥೆಯ ಬ್ಯಾನರಡಿ ಸಿನಿಮಾವೊಂದರ ಚಿತ್ರೀಕರಣ ನಡೆಯುತ್ತಿದ್ದು ಅದರಲ್ಲಿ ಸಣ್ಣ ಪಾತ್ರವನ್ನು ಮಾಡಲು ದೂರದ ಊರಿಗೆ ತೆರಳಲು ಶಂಕರ್‍ಗೆ ಬುಲಾವ್ ಬಂದಿದೆ. ಅದರಂತೆ ಅವರು ಸಿನಿಮಾ ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದಾರೆ . ಆದ್ರೆ ಅಲ್ಲಿ ಶಂಕರ್‍ರವರಿಗೆ ಅನ್ನ ನೀರು ಸರಿಯಾಗಿ ಕೊಡದೆ ಅಗೌರವ ನೀಡಿದ್ದಾರೆ . ಇದರಿಂದ ಮನನೊಂದ ಶಂಕರ್ ಅವ್ಯವಸ್ಥೆಯ ಬಗ್ಗೆ ಪ್ರೊಡಕ್ಷನ್ ಬಳಿ ಕೇಳಿದ್ರೆವ ನಾವು ಈಗಿನ ಕಾಲದ ಯುವಕರು ಅನ್ನೋ ಮೂಲಕ ದರ್ಪ ತೋರಿದ್ದಾರೆ .