ಮೇಷ:- ನಿಮ್ಮ ನಡೆ-ನುಡಿ ಮತ್ತು ಮಾತಿನ ಜಾಣ್ಮೆಯಿಂದ ಜನರ ಮನಸ್ಸನ್ನು ಗೆಲ್ಲುವಿರಿ. ನಿಮ್ಮ ಕ್ರಿಯಾಶೀಲತೆಯೇ ನಿಮ್ಮ ಪಾಲಿಗೆ ಶ್ರೀರಕ್ಷೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು.
ವೃಷಭ:- ಸಾಲ ನೀಡಲು ಇಲ್ಲವೆ ಸಾಲ ತೆಗೆದುಕೊಳ್ಳಲು ಮುಂದಾಗದಿರಿ. ಕೆಮ್ಮು ಕಫದಂತಹ ತೊಂದರೆಗಳಿಂದ ನರಳಬೇಕಾಗುವುದು. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.
ಮಿಥುನ:- ಪ್ರೇಮ ಕುರುಡು ಅದಕ್ಕೆ ಹೊರಗಿನ ರೀತಿ ರಿವಾಜುಗಳ ಗೊಡವೇ ಬೇಡ. ತಾನು ಅಂದುಕೊಂಡದ್ದೆ ಸತ್ಯ ಎಂದು ತಿಳಿದು ಮುಂದುವರಿಯುವುದರಿಂದ ತೊಂದರೆ ಎದುರಿಸಬೇಕಾಗುವುದು. ಕೆಲವರಿಗೆ ಕಂಕಣಭಾಗ್ಯ ಕೂಡಿ ಬರುವುದು.
ಕಟಕ:- ಒಳ್ಳೆಯ ರೀತಿಯ ಲಾಭಕ್ಕೆ ದಾರಿ ಆಗಬಹುದಾದ ವಹಿವಾಟುಗಳನ್ನು ನೀವು ಹೆಚ್ಚಿನ ಎಚ್ಚರದಿಂದಲೇ ನಡೆಸಿ. ಆಸ್ತಿಗೆ ಸಂಬಂಧಪಟ್ಟ ವ್ಯವಹಾರದಲ್ಲಿಅನುಕೂಲವಾಗುವುದು. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
ಸಿಂಹ:- ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅವರನ್ನು ಚಿಕ್ಕಮಕ್ಕಳಂತೆ ದಂಡಿಸಿದರೆ ಅವರು ನಿಮ್ಮ ವಿರುದ್ಧ ತಿರುಗಿ ಬೀಳುವರು. ಮನೆಯ ಸದಸ್ಯರ ವಿಶ್ವಾಸವನ್ನು ಪಡೆಯಿರಿ.
ಕನ್ಯಾ:- ಭೂಮಿಗೆ ಸಂಬಂಧಸಿದ ಮಧ್ಯವರ್ತಿತನ ಹಾಗೂ ಮಾರಾಟದ ವ್ಯವಹಾರಗಳಲ್ಲಿ ವಿಶೇಷವಾದ ಎಚ್ಚರಿಕೆ ಇರಲಿ. ಸೂಕ್ತ ದಾಖಲೆಗಳೊಂದಿಗೆ ವ್ಯವಹರಿಸುವುದು ಉತ್ತಮ. ಈ ಬಗ್ಗೆ ಸರಿಯಾದ ವ್ಯಕ್ತಿಗಳ ಮಾರ್ಗದರ್ಶನ ಪಡೆಯಿರಿ.
ತುಲಾ:- ಸಿನಿಮಾ ವ್ಯವಹಾರಕ್ಕೆ ಸಂಬಂಧಸಿದ, ವಜ್ರಾಭರಣ ವ್ಯಾಪಾರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸುವುದು ಸೂಕ್ತವಲ್ಲ. ಕಟ್ಟಡ ಕೆಲಸಗಾರರು, ತಾಂತ್ರಿಕರು ಎಚ್ಚರಿಕೆಯಿಂದ ಕೆಲಸ ತೆಗೆದುಕೊಳ್ಳಿ. ಹಣಕಾಸಿನ ಪರಿಸ್ಥಿತಿ ಬಿಗಡಾಯಿಸುವ ಸಂದರ್ಭವಿದೆ.
ವೃಶ್ಚಿಕ:- ನೆರೆಹೊರೆಯ ಜನರ ಜೊತೆ ಎಷ್ಟು ಸೌಹಾರ್ದತೆಯಿಂದ ಇದ್ದರೂ ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿಕೊಂಡು ಜಗಳ ತೆಗೆಯುವ ಸಾಧ್ಯತೆ ಇದೆ. ಸದ್ಯದ ಗ್ರಹಸ್ಥಿತಿ ಸರಿ ಇಲ್ಲದ ಕಾರಣ ಕೆಲವನ್ನು ಕಂಡರೂ ಕಾಣದಂತೆ ಇರಬೇಕಾಗುವುದು.
ಧನುಸ್ಸು:- ದುಷ್ಮನ್ ಕಹಾ ಹೇ ಅಂದರೆ ಬಗಲ್ ಮೆ ಹೇ ಎನ್ನುವಂತೆ ದೂರದ ಶತ್ರುಗಳಿಂದ ನಿಮಗೆ ತೊಂದರೆ ಇಲ್ಲ. ಹತ್ತಿರದವರೇ ನಿಮ್ಮ ಬೆನ್ನಿಗೆ ಚೂರಿ ಹಾಕುವ ಸಂದರ್ಭವಿದೆ. ಆದಷ್ಟು ಅಪರಿಚಿತರಿಂದ ದೂರವಿರಿ. ಪ್ರತಿ ಹಣಕಾಸಿನ ವ್ಯವಹಾರಕ್ಕೆ ಲೆಕ್ಕ ಪಕ್ಕಾ ಇಡಿ.
ಮಕರ:- ಭಗವಂತನ ಒಲುಮೆ ಇದ್ದರೆ ಬೇರೆ ಯಾರ ಹಂಗೂ ಬೇಡ. ಅಂತೆಯೇ ನಿಮ್ಮ ಕಠಿಣ ತಪಸ್ಸಿಗೆ, ಪರಿಶ್ರಮಕ್ಕೆ ತಕ್ಕಂತೆ ವ್ಯಾಪಾರ, ವ್ಯವಹಾರದಲ್ಲಿಆಶಾದಾಯಕ ಬೆಳವಣಿಗೆ ಕಂಡು ಬರುವುದು. ಅದನ್ನು ಪೂರ್ಣ ಪ್ರಮಾಣವಾಗಿ ಬಳಸಿಕೊಳ್ಳಿ.
ಕುಂಭ:- ಪ್ರವಾಸದಿಂದ ಮನಸ್ಸು ಪ್ರಫುಲ್ಲವಾಗುವುದು. ಸಹೋದರನ ಮನೆಯಲ್ಲಿಸಂಭ್ರಮದ ವಾತಾವರಣದಲ್ಲಿ ಭಾಗವಹಿಸಿ. ಮಾತಾಪಿತರೊಂದಿಗೆ ಸ್ನೇಹದಿಂದ ವರ್ತಿಸಿ ಅವರ ಕೃಪಾಶೀರ್ವಾದ ಪಡೆಯಿರಿ.
ಮೀನ:- ವಿಶಿಷ್ಟವಾದ ಮತ್ತು ನಿಗೂಢವಾದ ಅನುಭವವೊಂದು ನಿಮ್ಮ ಪಾಲಿಗೆ ಲಭ್ಯವಾಗಲಿದೆ. ಅದರಿಂದ ಆಧ್ಯಾತ್ಮದ ಹರಿವು ಹೆಚ್ಚಾಗುವುದು. ಅಂತರ್‌ಮುಖಿಗಳಾಗಿ ದೇವತಾ ಆರಾಧನೆ ಮಾಡುವಿರಿ.