ಬಹುತೇಕ ನಟ-ನಟಿಯರು ಪ್ರಯಾಣಿಸುವಾಗ ತಮ್ಮ ಟ್ರಾಲಿಗಳನ್ನು ಆಪ್ತ ಸಹಾಯಕರಿಗೆ ನೀಡುವುದು ಸಹಜ. ಆದರೆ ನಟಿ ಸಾರಾ ಆಲಿ ಖಾನ್ ತಮ್ಮ ಲಗೇಜ್‌ನ್ನು ತಾವೇ ತಂದಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈ ಏರ್‌ಪೋರ್ಟ್‌ನಲ್ಲಿ ಟ್ರಾಲಿಯಲ್ಲಿ ತಮ್ಮ ಲಗೇಜ್‌ಗಳನ್ನು ತುಂಬಿಕೊಂಡು,ಅದನ್ನು ಬ್ಯಾಲೆನ್ಸ್ ಮಾಡಿಕೊಂಡು ಸಾರಾ ಬರುತ್ತಿರುವ ವಿಡಿಯೋವನ್ನು ಫೋಟೋಗ್ರಾಫರ್ ಮಾನವ್ ಮಂಗ್ನಾಲಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ. ಇದೀಗ ಅದು ವೈರಲ್ ಆಗಿದ್ದೆ.