ಚೆನ್ನೈ: Indian Premier League 2026 ಟೂರ್ನಿಯಲ್ಲಿ Mumbai Indians ತಂಡದ ಕಳಪೆ ಪ್ರದರ್ಶನ ಮುಂದುವರಿದಿದ್ದು, ಮತ್ತೊಂದು ಸೋಲು ಅನುಭವಿಸಿದೆ. ಶನಿವಾರ ನಡೆದ 44ನೇ ಪಂದ್ಯದಲ್ಲಿ Chennai Super Kings ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಚೆನ್ನೈನ M. A. Chidambaram Stadium ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರಿಯಾನ್ ರಿಕೆಲ್ಟಾನ್ 37 ರನ್, ನಮನ್ ಧಿರ್ 57 ರನ್ ಗಳಿಸಿ ಹೋರಾಟ ನಡೆಸಿದರೂ, ಸೂರ್ಯಕುಮಾರ್ ಯಾದವ್ (21), ಹಾರ್ದಿಕ್ ಪಾಂಡ್ಯ (18) ಸೇರಿದಂತೆ ಇತರರು ನಿರೀಕ್ಷೆ ತೀರಿಸಲಿಲ್ಲ. ಪರಿಣಾಮವಾಗಿ ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್‌ಗಳಿಗೆ ಸೀಮಿತವಾಯಿತು.
ಚೆನ್ನೈ ಪರ ಅಂಶುಲ್ ಕಾಂಬೋಜ್ 3 ವಿಕೆಟ್ ಪಡೆದು ಮಿಂಚಿದರು. 160 ರನ್ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಸುಲಭವಾಗಿ ಗೆಲುವು ಸಾಧಿಸಿತು. ನಾಯಕ Ruturaj Gaikwad ಅಜೇಯ 67 ರನ್ ಗಳಿಸಿ ತಂಡವನ್ನು ಮುನ್ನಡೆಸಿದರೆ, ಕಾರ್ತಿಕ್ ಶರ್ಮಾ ಅಜೇಯ 54 ರನ್ ಗಳಿಸಿ ಗೆಲುವು ಖಚಿತಪಡಿಸಿದರು.ಚೆನ್ನೈ 18.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಭರ್ಜರಿ ಜಯ ಸಾಧಿಸಿತು.
Kartik finishing off in style! 💛🥳#WhistlePodu #CSKvMI pic.twitter.com/9fAVhPzLyG
— Chennai Super Kings (@ChennaiIPL) May 2, 2026
ಈ ಸೋಲಿನಿಂದ ಮುಂಬೈ ಇಂಡಿಯನ್ಸ್ ಸಂಕಷ್ಟ ಮತ್ತಷ್ಟು ಗಂಭೀರವಾಗಿದ್ದು, ಟೂರ್ನಿಯಲ್ಲಿ ಮುಂದಿನ ಹಾದಿ ಕಠಿಣವಾಗಿದೆ. ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಹಾದಿಯಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.


























































