ಮಂಗಳೂರು: ಇತ್ತೀಚಿಗೆ ಅಸಹಜವಾಗಿ ಸಾವನ್ನಪ್ಪಿದ್ದ ಬೆಳ್ತಂಗಡಿ ತಾಲೂಕು ಓಡಿಲ್ನಾಳ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಸುಮಂತ್ ಹೆತ್ತವರಿಗೆ ಕಾಂಗ್ರೆಸ್ ನಾಯಕ, ಬಿಲ್ಲವ ಮುಖಂಡ ಪದ್ಮರಾಜ್ ಪೂಜಾರಿ ಸಾಂತ್ವನ ಹೇಳಿದ್ದಾರೆ. ಮೃತ ವಿದ್ಯಾರ್ಥಿಯ ಮನೆಗೆ ತೆರಳಿದ ಪದ್ಮರಾಜ್ ಪೂಜಾರಿ ವಿದ್ಯಾರ್ಥಿಯ ಕುಟುಂಬ ಸದಸ್ಯರಿಗೆ ನೆರವಿನ ಭರವಸೆ ನೀಡಿದರು.

ಬೆಳ್ತಂಗಡಿ ತಾಲೂಕು ಓಡಿಲ್ನಾಳ ಗ್ರಾಮದ ಬರಮೇಲು ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಸುಮಂತ್ ಅಸಹಜವಾಗಿ ಸಾವನ್ನಪ್ಪಿದ್ದ. ಈ ಸುದ್ದಿ ತಿಳಿದ ಪದ್ಮರಾಜ್ ಪೂಜಾರಿ, ಮೃತ ಬಾಲಕನ ಮನೆಗೆ ತೆರಳಿ, ಹೆತ್ತವರು, ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದರು. ಸ್ಥಳೀಯ ಮುಖಂಡರಾದ ಹರೀಶ್, ಜಗದೀಶ್ ಕೊಯಿಲ, ದಾಮೋದರ ಪೂಜಾರಿ ಜತೆಗಿದ್ದರು.
‘ಗುರು ಬೆಳದಿಂಗಳು’ ಗುಂಪಿನ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿರುವ ಪದ್ಮರಾಜ್ ಪೂಜಾರಿ, ಈ ಹಿಂದೆ ಮೃತಪಟ್ಟಿದ್ದ ಪ್ರವೀಣ್ ನೆಟ್ಟಾರು ಸಹಿತ ಅನೇಕರ ಕುಟುಂಬಗಳಿಗೆ ನೆರವು ನೀಡಿದ್ದರು.























































