ಬೆಂಗಳೂರು: ಕರ್ನಾಟಕ ಆರ್ಟ್ಸ್ ಫೌಂಡೇಶನ್ ವತಿಯಿಂದ 163ನೇ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮವು ಬೆಂಗಳೂರು ನಗರ ಕೆಂಗೇರಿ ಉಪನಗರದ ರಾಮಕೃಷ್ಣ ಶಾಲೆಯಲ್ಲಿ ಸೋಮವಾರ ಸಂಜೆ ವಿಶೇಷ ಉಪನ್ಯಾಸ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಸ್ವಾಮಿ ವಿವೇಕಾನಂದವರ ಬಾಲ್ಯ ಜೀವನದ ಘಟನೆಗಳು ತಿಳಿಸುತ್ತಾ, ಇವರ ಆದರ್ಶ, ಬೋಧನೆಗಳು ಯುವ ಸಮೂಹಕ್ಕೆ ಮಾದರಿ ಎಂದರು. ಇಂದಿಗೂ ಎಂದಿಗೂ ಕೂಡ ಅವರ ನಡೆ-ನುಡಿ, ಜೀವನದ ಪ್ರಸಂಗಗಳು ದಂತಕಥೆಗಳಾಗಿ ಬೆಳಗುತ್ತಿವೆ ಎಂದು ತಿಳಿಸಿದರು.
ವಿವೇಕಾನಂದರು ಆಯ್ಕೆ ಮಾಡಿಕೊಂಡಿದ್ದು, ಆರ್ಯ ಸಮಾಜದ ಅನುಯಾಯಿಗಳಾಗಿ, ಶ್ರೀ ರಾಮಕೃಷ್ಣ ಪರಮಹಂಸರವರು ಇವರ ಗುರುಗಳಾಗಿದ್ದರು. ಇವರು ಸರಳವಾಗಿ ಇದ್ದುಕೊಂಡು ಸನಾತನ ಧರ್ಮವನ್ನು ಪ್ರಪಂಚದ ಭೂಪಟದಲ್ಲಿ ಎಲ್ಲರೂ ನೋಡುವಂತೆ ಮಾಡಿದ್ದು ಇತಿಹಾಸವಾಗಿದೆ.
1893ರಲ್ಲಿ ನಡೆದ ಅಮೆರಿಕಾದ ಚಿಕಾಗೋ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಭಾರತದ ಸಂಸ್ಕೃತಿ ಮತ್ತು ಗೌರವವನ್ನು ಪ್ರಪಂಚಕ್ಕೆ ತಿಳಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ.
ವಿವೇಕಾನಂದರು ಒಮ್ಮೆ ಕರ್ನಾಟಕದ ಮೈಸೂರು ಸಂಸ್ಥಾನದ ಮಹಾರಾಜರ ಬಳಿ ಬಂದಾಗ, ನಂತರದಲ್ಲಿ ಬೆಂಗಳೂರಿನ ಕಾಡು ಮಲ್ಲೇಶ್ವರ ದೇವಸ್ಥಾನ, ಬೆಳಗಾವಿ ಸಹ ಬಂದಿದ್ದು ಇದೊಂದು ಕರ್ನಾಟಕದ ಅಜರಾಮರ ಎಂದು ಹೇಳಿದರು. ಘನ ಉಪಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುಧೀಂದ್ರ ಕುಮಾರ್ ರವರು ಮಾತನಾಡಿದರು.
ನಂತರದಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಜನಪದ ಕಲಾವಿದ ಅಪ್ಪಗೆರೆ ತಿಮ್ಮರಾಜುರವರು ಈ ಮೂವರು ಸಾಧಕರು ಇಷ್ಟೇ ಸಾಧನೆಗೆ ಸೀಮಿತವಾಗದೇ ಇನ್ನೂ ಈ ನಮ್ಮ ರಾಜ್ಯಕ್ಕೆ ಮತ್ತು ದೇಶಕ್ಕೆ ಒಳ್ಳೆಯ ಹೆಸರು ತರಬೇಕೆಂದು ಆಶಿಸಿದರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ‘ವಿವೇಕಾನಂದ ಯುವ ಪ್ರಶಸ್ತಿಯನ್ನು ಕೆಂಗೇರಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುರೇಖ, ಟೊಯೋಟಾ ಕಿರ್ಲೋಸ್ಕರ್ ನೌಕರರ ಅಧ್ಯಕ್ಷ ದೀಪಕ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ ಸಂಶೋಧನಾ ವಿದ್ಯಾರ್ಥಿ (ಪಿಎಚ್.ಡಿ) ಈಶ್ವರ್ ಇವರುಗಳಿಗೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಕಸಾಪ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುಧೀಂದ್ರ ಕುಮಾರ್, ಅಂತಾರಾಷ್ಟ್ರೀಯ ಜನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು, ರಾಜ್ಯ ಬಿಜೆಪಿ ವಕ್ತಾರರು ಮತ್ತು ರಾಷ್ಟ್ರೀಯ ಭೀಮ ಪಡೆ ರಾಜ್ಯಾಧ್ಯಕ್ಷರು, ಆತ್ಮಾನಂದ ಎಚ್. ಅಂದಾನಿ, ರಾಧಾಕೃಷ್ಣ ಶಾಲೆಯ ಚೇರ್ಮನ್ ಕೇಶವ ಮೂರ್ತಿ, ಕರ್ನಾಟಕ ಆರ್ಟ್ಸ್ ಫೌಂಡೇಶನ್ ಅಧ್ಯಕ್ಷರಾದ ಸರೋಜಾ ಆತ್ಮಾನಂದರವರು, ಸದಸ್ಯರಾದ ಅರುಣ್ ಕುಮಾರ್, ಖಜಾಂಚಿ ದೀಪಕ್, ವಕೀಲ ಅರುಣ್ ಹಾನಗಲ್, ಬೆಂಗಳೂರು ವಿವಿಯ ನೌಕರ ಗೌರಿಶಂಕರ್, ಎಂಎಡ್ ಪ್ರಶಿಕ್ಷಾಣಾರ್ಥಿ ಬಸವರಾಜ ಪ್ರಭು, ತಾಯರೆಡ್ಡಿ, ಸತೀಶ್ ಕೆ, ಗಂಗಾರಾಜು ಎಂ ಉಪಸ್ಥಿತರಿದ್ದರು.



















































