ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರಾದ 2026-28ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಜಿ.ರಾಮಮೂರ್ತಿರವರು ಆಯ್ಕೆಯಾಗಿದ್ದಾರೆ.
ಮುಖ್ಯ ಚುನಾವಣೆ ಅಧಿಕಾರಿಗಳು ಸಂಜೀವ್ ಸಹಾಯಕ ಚುನಾವಣೆ ಅಧಿಕಾರಿ ಶ್ರೀನಿವಾಸ್ ರವರು ಪ್ರಮಾಣಪತ್ರ ನೀಡಿದರು. ಅಧ್ಯಕ್ಷರಾದ ಎಂ.ಜಿ.ರಾಮಮೂರ್ತಿ. ನಂದಿಯಾಳ್ ಎಸ್ ಜೆ. ಬಾಮ ಗಿರೀಶ್. ಆರ್ ಎಸ್ ಗೌಡ್ರು. ರಮೇಶ್ ಯಾದವ್ ರವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಂ.ಜಿ.ರಾಮಮೂರ್ತಿರವರು ಮಾತನಾಡಿ ಕನ್ನಡ ಚಲನಚಿತ್ರ ಮೇರುನಟ ಡಾ||ರಾಜ್ ಕುಮಾರ್ ರವರು ನಿರ್ಮಾಪಕರನ್ನ ಅನ್ನದಾತರು ಎಂದು ಕರೆಯುತ್ತಿದ್ದಾರೆ.
ನಿರ್ಮಾಪಕ ಉಳಿದರೆ ಕನ್ನಡ ಚಿತ್ರರಂಗ ಉಳಿಯುತ್ತದೆ. ನಿರ್ಮಾಪಕ ಹಾಕಿದ ಹಣ ವಾಪಸ್ಸು ಬರಬೇಕು. ಕೆಲವು ನಿರ್ಮಾಪಕರು ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದಾರೆ ಅವರನ್ನ ಗುರುತಿಸಿ ನಿರ್ಮಾಪಕರ ಸಂಘದಿಂದ ಆರ್ಥಿಕವಾಗಿ ಸಹಾಯ ಮಾಡಬೇಕು ಎಂಬ ಉದ್ದೇಶವಿದೆ ಎಂದರು.
ಕನ್ನಡ ಚಲನಚಿತ್ರ ಅನ್ಯ ಭಾಷೆಗಳ ನಡುವೆ ಪೈಪೋಟಿ ಇದೆ, ಕನ್ನಡ ಚಿತ್ರಗಳಿಗೆ ಜನರು ಚಿತ್ರಮಂದಿರಕ್ಕೆ ಬಂದು ನೋಡಿ, ನಿರ್ಮಾಪಕ, ನಿರ್ದೇಶಕ ಮತ್ತು ನಟ, ನಟಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.



















































