ಬೆಂಗಳೂರು: ರಾಜ್ಯದ ಸರ್ಕಾರಿ ಸಂಸ್ಥೆಗಳ ಪೈಕಿ ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಿಸಿದ ಸಂಸ್ಥೆಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಮತ್ತೆ ಮೆರಗು ತೋರಿದೆ. ಸತತ 11ನೇ ಬಾರಿ ಈ ಗೌರವ ಕೆಎಸ್ಆರ್‌ಟಿಸಿಗೆ ಲಭಿಸಿದೆ.
ಡಿಸೆಂಬರ್ 7ರಂದು ರಾಜಭವನದಲ್ಲಿ ನಡೆದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ, ಕರ್ನಾಟಕ ಸರ್ಕಾರದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಕೆಎಸ್ಆರ್‌ಟಿಸಿನ ಸಿಬ್ಬಂದಿ ಮತ್ತು ಜಾಗೃತಿ ನಿರ್ದೇಶಕಿ ಡಾ. ನಂದಿನಿದೇವಿ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ವಿ. ಶರತ್‌ಚಂದ್ರ, ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕ (ಪ್ರ) ಫ್ಲೈಟ್ ಲೆಫ್ಟಿನೆಂಟ್ ಎಂ. ಎಸ್. ಲೋಲಾಕ್ಷ (ನಿವೃತ್ತ) ಉಪಸ್ಥಿತರಿದ್ದರು.
ರಾಜ್ಯದ ಸರ್ಕಾರಿ ಸಂಸ್ಥೆಗಳಲ್ಲಿ ನಿಗದಿಗಿಂತ ಹೆಚ್ಚಿನ ಮೊತ್ತವನ್ನು ಧ್ವಜ ನಿಧಿಗೆ ಸಂಗ್ರಹಿಸುವ ಮೂಲಕ ಕೆಎಸ್ಆರ್‌ಟಿಸಿ ಪಡೆವ ಗೌರವ ಪ್ರತಿ ವರ್ಷವೂ ಹೆಚ್ಚುತ್ತಿದ್ದು, ಈ ಬಾರಿ 11ನೇ ಸಂಭ್ರಮವನ್ನು ದಾಖಲಿಸಿದೆ.



















































