ಬೆಂಗಳೂರು: ಅಲೈಯನ್ಸ್ ವಿಶ್ವವಿದ್ಯಾಲಯ, ಬೆಂಗಳೂರು ಇವರಲ್ಲಿ ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್ (NCC) 77ನೇ ವಾರ್ಷಿಕೋತ್ಸವ ವಿಶ್ವವಿದ್ಯಾಲಯ ಆವರಣದಲ್ಲಿ ನೆರವೇರಿತು. ಅಲೈಯನ್ಸ್ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರಥಮ NCC ದಿನಾಚರಣೆ ಇದಾಗಿದ್ದು, 40 ಕರ್ನಾಟಕ ಬ್ಯಾಟಾಲಿಯನ್ ಆರ್ಮಿ, ಗ್ರೂಪ್ ‘B’, ಬೆಂಗಳೂರು ಇವರ ಸಹಯೋಗದಲ್ಲಿ ಯಶಸ್ವಿಯಾಗಿ ನೆರವೇರಿದೆ.

ಅಲೈಯನ್ಸ್ ವಿಶ್ವವಿದ್ಯಾಲಯದ ಸಹ NCC ಅಧಿಕಾರಿ ಲೆಫ್ಟಿನೆಂಟ್ ಡಾ. ವೈ. ನರಸಿಂಹ ರಾಜ ಅವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು. ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್ ಅಭಯ ಚೆಬ್ಬಿ, , ಕುಲಪತಿ ಪ್ರೊ. ಡಾ. ಪ್ರಿಸ್ಟ್‌ಲಿ ಶಾನ್, ಜೊತೆಗೆ ವಿಶ್ವವಿದ್ಯಾಲಯದ ನಾಯಕರ ತಂಡವು NCC ಕ್ಯಾಡೆಟ್‌ಗಳಿಗೆ ಅವರ ಶ್ರೇಷ್ಠ ಸೇವೆ, ಶಿಸ್ತು ಮತ್ತು ಸಮರ್ಪಣೆಯನ್ನು ಮೆಚ್ಚಿ ಅಭಿನಂದಿಸಿದೆ.
ಕಾರ್ಯಕ್ರಮದಲ್ಲಿ NCC ಧ್ವಜಾರೋಹಣ, ಪೆರೇಡ್ ಪ್ರದರ್ಶನ, ಡ್ರಿಲ್ ಸ್ಪರ್ಧೆಗಳು, ಸಾಂಸ್ಕೃತಿಕ ವಿನೋದಗಳು, ಹಾಗೂ ಕ್ರೀಡಾ ಕಾರ್ಯಕ್ರಮಗಳು ಗಮನಸೆಳೆದವು. NCC ಯ “ಏಕತೆ ಮತ್ತು ಶಿಸ್ತು” ಎಂಬ ಧ್ಯೇಯವಾಕ್ಯದ ಸಾರ್ಥಕತೆಯನ್ನು ಉದ್ಘೋಷಿಸಿದವು. ಕ್ಯಾಡೆಟ್‌ಗಳು ದೇಶಭಕ್ತಿಯ NCC ಗೀತೆಗಳ ಮೂಲಕ ನೋಡುಗರಿಗೆ ಸ್ಪೂರ್ತಿಯಾದರು.
“ವಂದೇ ಮಾತರಂ” ಆಧಾರಿತ ವಾರ್ಷಿಕೋತ್ಸವದ ಅಂಗವಾಗಿ, ಕ್ಯಾಡೆಟ್‌ಗಳು ರಕ್ತದಾನ ಶಿಬಿರ, ಮರ ನೆಡುವ ಕಾರ್ಯಕ್ರಮ, ಕ್ವಿಜ್ ಸ್ಪರ್ಧೆಗಳು, ವೆಬಿನಾರ್‌ಗಳು ಸಹಿತ ಅರ್ಥಪೂರ್ಣ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಇದರಿಂದ NCC ಕ್ಯಾಡೆಟ್‌ಗಳ ಸಮಾಜ ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಬದ್ಧತೆ ಮತ್ತೊಮ್ಮೆ ಸ್ಪಷ್ಟವಾಯಿತು.






















































