ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಕಾರು ಅಪಘಾತವಾಗಿದೆ.
ಗದ್ವಾಲ್ ಜಿಲ್ಲೆಯ ಉಂಡವೆಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸೋಮವಾರ ನಟ ವಿಜಯ್ ದೇವರಕೊಂಡ ಅವರ ಕಾರು, ಅಪಘಾತಕ್ಕೀಡಾಗಿದೆ.
ಪುಟ್ಟಪರ್ತಿಯಿಂದ ಹೈದರಾಬಾದ್‌ಗೆ ಮರಳುತ್ತಿದ್ದಾಗ ಅವರಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿದೆ ಎನ್ನಲಾಗಿದ್ದು, ನಟನಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.