ಕರ್ನೂಲ್: ವಿಜಯದಶಮಿ ಸಂದರ್ಭದಲ್ಲಿ ಸಾಂಪ್ರದಾಯಿಕ ಬನ್ನಿ ಉತ್ಸವ ವೇಳೆ ಕೋಲುಗಳಿಂದ ನಡೆಯುವ ಕಾಳಗದಲ್ಲಿ ಇಬ್ಬರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
కర్నూలు ‘దేవరగట్టు సమరం’ 🔥🔥🔥🔥🔥🥵
తరతరాలుగా వస్తున్న ఆచారం శ్రీ మాల మల్లేశ్వర స్వామి వార్ల విగ్రహాలని దక్కించుకునేందుకు 11 ఊర్ల గ్రామ ప్రజలు రక్తం చిందించి భక్తితో చేసే సమరం 🙏. #Devara #Kurnool #Devaragattu pic.twitter.com/RylANzHIta
— Narasimha NTR 🦚 (@NarasimhaNTR_) October 3, 2025
ಪ್ರತಿ ವರ್ಷದಂತೆ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹೊಳಗೊಂಡ ‘ಮಂಡಲ’ (ಬ್ಲಾಕ್) ನ ದೇವೆರಾಗಟ್ಟು ಗ್ರಾಮದಲ್ಲಿ ಗುರುವಾರ ತಡರಾತ್ರಿ ದಸರಾ ಆಚರಣೆಯ ಭಾಗವಾಗಿ ನಡೆದ ದೇವರಗಟ್ಟು ಬನ್ನಿ ಉತ್ಸವದ ಸಂದರ್ಭದಲ್ಲಿ ಎರಡು ಗುಂಪುಗಳು ಕೋಲುಗಳಿಂದ ಪರಸ್ಪರ ದಾಳಿ ನಡೆಸಿದವು. ಇದು ಸಾಂಪ್ರಾಯಾಯಿಕ ಆಚರಣೆಯಾಗಿದೆ. ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಕೈಂಕರ್ಯದ ಸಂದರ್ಭದಲ್ಲಿ ಹದಿನೆಂಟು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಅದೋನಿ ಮತ್ತು ಆಲೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಬೆಟ್ಟದ ಮೇಲಿರುವ ಮಾಲಾ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದಸರಾ ಆಚರಣೆಯ ಭಾಗವಾಗಿ ಪ್ರತಿ ವರ್ಷ ಕೋಲು ಕಾಳಗವನ್ನು ಆಯೋಜಿಸಲಾಗುತ್ತದೆ. ಹಿಂದಿನಂತೆ, ಗ್ರಾಮಸ್ಥರು ಪೊಲೀಸರ ಆದೇಶಗಳನ್ನು ಧಿಕ್ಕರಿಸಿ ಹೋರಾಟವನ್ನು ಆಯೋಜಿಸಿದರು ಎನ್ನಲಾಗುತ್ತಿದೆ. ಆದರೆ ಇದು ಅವರ ಸಂಪ್ರದಾಯದ ಭಾಗವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ವಾರ್ಷಿಕ ಆಚರಣೆಯ ಭಾಗವಾಗಿ, ವಿವಿಧ ಹಳ್ಳಿಗಳ ಜನರು ಎರಡು ಗುಂಪುಗಳಾಗಿ ವಿಂಗಡಿಸಿ, ಮಧ್ಯರಾತ್ರಿ ವಿಧ್ಯುಕ್ತ ವಿವಾಹ ಆಚರಣೆಯ ನಂತರ ಮಲ್ಲಮ್ಮ ಮತ್ತು ಮಲ್ಲೇಶ್ವರ ಸ್ವಾಮಿಯ ವಿಗ್ರಹಗಳನ್ನು ಭದ್ರಪಡಿಸಿಕೊಳ್ಳಲು ಕೋಲುಗಳೊಂದಿಗೆ ಹೋರಾಡುವುದೇ ಉತ್ಸವದ ಕೇಂದ್ರಬಿಂದು.
ಎರಡೂ ಗುಂಪುಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದವು. ಹೋರಾಟವನ್ನು ನಿಲ್ಲಿಸಲು ಪೊಲೀಸರು ತೆಗೆದುಕೊಂಡ ತಡೆಗಟ್ಟುವ ಕ್ರಮಗಳು ಯಾವುದೇ ಪರಿಣಾಮ ಬೀರಲಿಲ್ಲ. ಪ್ರತಿ ವರ್ಷ, ದೇವಾಲಯದ ಸುತ್ತಮುತ್ತಲಿನ ಹಳ್ಳಿಗಳ ಜನರು ಎರಡು ಗುಂಪುಗಳಾಗಿ ವಿಂಗಡಿಸಲ್ಪಟ್ಟು ವಿಗ್ರಹಗಳನ್ನು ನಿಯಂತ್ರಿಸಲು ಕೋಲುಗಳೊಂದಿಗೆ ಹೋರಾಡುತ್ತಾರೆ.
ನೇರಣಿ, ನೇರಣಿ ತಾಂಡಾ ಮತ್ತು ಕೊಥಪೇಟ ಗ್ರಾಮಗಳ ಗ್ರಾಮಸ್ಥರು ಅರಿಕೇರಾ, ಆಲೂರು, ಸುಲುವಾಯಿ, ಎಲ್ಲಾರ್ಥಿ, ನಿದ್ರವಟ್ಟಿ ಮತ್ತು ಬಿಲೆಹಾಳ್ ಗ್ರಾಮಗಳ ಭಕ್ತರೊಂದಿಗೆ ಹೋರಾಡುತ್ತಾರೆ. ಅವರು ಪರಸ್ಪರ ಕೋಲುಗಳಿಂದ ನಿರ್ದಯವಾಗಿ ದಾಳಿ ಮಾಡುತ್ತಾರೆ. ಹೋರಾಟದಲ್ಲಿ, ಅನೇಕರು ಗಾಯಗೊಳ್ಳುತ್ತಾರಾದರೂ ಈ ಗಾಯಗಳನ್ನು ಒಳ್ಳೆಯ ಶಕುನವೆಂದು ಪರಿಗಣಿಸುತ್ತಾರೆ.
ಗ್ರಾಮಸ್ಥರನ್ನು ಹೋರಾಟವನ್ನು ಆಯೋಜಿಸದಂತೆ ತಡೆಯಲು ಅಧಿಕಾರಿಗಳು ಮಾಡಿದ ಪ್ರಯತ್ನಗಳು ಸಫಲವಾಗಲಿಲ್ಲ. ಪ್ರತಿ ವರ್ಷ, ಪೊಲೀಸರು ಹೋರಾಟವನ್ನು ತಡೆಯಲು ಪಡೆಗಳನ್ನು ನಿಯೋಜಿಸುತ್ತಾರೆ, ಆದರೆ ಗ್ರಾಮಸ್ಥರು ಆದೇಶಗಳನ್ನು ಧಿಕ್ಕರಿಸಿ ಹೋರಾಟವನ್ನು ಆಯೋಜಿಸುತ್ತಾರೆ.
ಪುರಾಣದಲ್ಲಿ ಶಿವನು ಭೈರವ ರೂಪವನ್ನು ತೆಗೆದುಕೊಂಡು ಮಣಿ ಮತ್ತು ಮಲ್ಲಾಸುರ ಎಂಬ ಇಬ್ಬರು ರಾಕ್ಷಸರನ್ನು ಕೋಲುಗಳಿಂದ ಹೊಡೆದನು ಎಂಬುದ ಆಸ್ತಿಕರ ನಂಬಿಕೆ. ವಿಜಯದಶಮಿ ದಿನದಂದು ಗ್ರಾಮಸ್ಥರು ಈ ಸನ್ನಿವೇಶಕ್ಕೆ ತಕ್ಕಂತೆ ಆಚರಣೆ ನಡೆಸಿ, ಈ ರೀತಿ ಬಡಿದಾಡಿಕೊಳ್ಳುತ್ತಾರೆ. ರಾಕ್ಷಸನ ಕಡೆಯ ಗ್ರಾಮಸ್ಥರ ಗುಂಪೊಂದು ದೇವರ ತಂಡ ಎಂದು ಕರೆಯಲ್ಪಡುವ ಪ್ರತಿಸ್ಪರ್ಧಿ ಗುಂಪಿನಿಂದ ವಿಗ್ರಹಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತದೆ. ವಿಗ್ರಹಗಳನ್ನು ನಿಯಂತ್ರಿಸಲು ಅವರು ಕೋಲುಗಳಿಂದ ಹೋರಾಡುತ್ತಾರೆ.
ಕರ್ನೂಲ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ವಿವಿಧ ಭಾಗಗಳಿಂದ ಮತ್ತು ತೆಲಂಗಾಣ ಮತ್ತು ಕರ್ನಾಟಕದಂತಹ ನೆರೆಯ ರಾಜ್ಯಗಳಿಂದ ಸಾವಿರಾರು ಜನರು ಸಾಂಪ್ರದಾಯಿಕ ಹೋರಾಟವನ್ನು ವೀಕ್ಷಿಸಲು ಗ್ರಾಮದಲ್ಲಿ ಸೇರುತ್ತಾರೆ. ಈ ಬಾರಿ ನಡೆದ ಆಚರಣೆಯಲ್ಲಿ ಸಾವು-ನೋವು ಸಂಭವಿಸಿರುವುದು ದುರಾದೃಷ್ಟಕರ ಎಂದು ಸ್ಥಳೀಯ ನಾಯಕರು ಹೇಳಿದ್ದಾರೆ.